ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಶ್ರಮದಿಂದ ಉಜ್ವಲ ಭವಿಷ್ಯ

Mainashree
Updated On : 25 Feb 2013, 10:52 am

ಹಿರೇಕೆರೂರು: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಸತತ ಅಧ್ಯಯನ ಮಾಡಬೇಕು. ಆಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಸತತ ಪರಿಶ್ರಮಪಟ್ಟು ಅಭ್ಯಾಸ ಮಾಡಬೇಕೆಂದು ಪ್ರಾಚಾರ್ಯ ಸಿ.ಆರ್. ಮುದಿಗೌಡ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಕುಡಪಲಿ ಗ್ರಾಮದ ವೀರಮಹೇಶ್ವರ ವಿದ್ಯಾಸಂಸ್ಥೆಯ ಜಿ.ಬಿ. ಶಂಕರರಾವ ಪದವಿಪೂರ್ವ ಕಾಲೇಜು ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೈನಂದಿನ ಬದುಕಿಗೆ ಶಿಕ್ಷಣದ ಪ್ರಾಮುಖ್ಯತೆ ಇರುವುದರಿಂದ ವಿದ್ಯಾರ್ಥಿಗಳು ಉಪನ್ಯಾಸಕರ ಸಲಹೆ ಮೇರೆಗೆ ಅಧ್ಯಯನ ಮಾಡಬೇಕು. ಅಲ್ಲದೇ ಕಷ್ಟಪಟ್ಟು ಅಧ್ಯಯನ ಮಾಡದೇ ಇಷ್ಟಪಟ್ಟು ಅಧ್ಯಯನದಲ್ಲಿ ತೊಡಗಬೇಕೆಂದು ಹೇಳಿದರು.
ಸಮಾಜದಲ್ಲಿ ಪಿಯುಸಿ ನಂತರ ಸಾಮಾಜಿಕ ಜೀವನದಲ್ಲಿ ಉತ್ತಮ ನಾಗರಿಕರಾಗಲು ಹಿರಿಯರಿಗೆ ಗೌರವ, ವಿನಯವಂತಿಕೆ ಹಾಗೂ ಸಚ್ಚಾರಿತ್ರ್ಯವಂಥರಾಗಬೇಕು. ಇಂತಹ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಸತ್ಪ್ರಜೆಗಳಾಗಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಕುಪ್ಪೇಲೂರು ಕಾರ್ಯಕ್ರಮ ಉದ್ಘಾಟಿಸಿದರು.
ಎಸ್.ಬಿ. ಪಾಟೀಲ, ಎಸ್.ಕೆ. ಕರೆಗೌಡ್ರ, ಹೊಸಗೌಡ್ರ, ವಿ.ಸಿ. ಪಾಟೀಲ, ನಾಗರಾಜ ಜಾಡರ,  ಶಿವನಗೌಡ ಪಾಟೀಲ, ಎಂ.ಎಸ್. ಬ್ರಿಷ್ಟನಗೌಡ್ರ, ಜಿ.ಎನ್. ಗುರುಸಿದ್ದಪ್ಪ, ಎಸ್.ಎನ್. ಮೆಳ್ಳಹಳ್ಳಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಿಕ್ಷಕ ಆರ್.ಎಂ. ದೇವರಮನಿ ಸ್ವಾಗತಿಸಿದರು. ಉಪನ್ಯಾಸಕ ಎನ್.ಎಫ್. ಜಾಡರ ನಿರ್ವಹಿಸಿದರು. ಡಿ.ಚಂದ್ರಶೇಖರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement