ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುದ್ದಿ ಸಂಕ್ಷೇಪ

Mainashree
Updated On : 25 Feb 2013, 10:52 am

ಮುತ್ತಣ್ಣಗೆ ಸನ್ಮಾನ
ಹಾನಗಲ್ಲ:  ತಾಲೂಕಿನ ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದಲ್ಲಿ ವೀರಭದ್ರೇಶ್ವರ ಜಾತ್ರೋತ್ಸವ ನಿಮಿತ್ತ ನಡೆದ ಪುರಾಣ ಪ್ರವಚನ ಪ್ರಾರಂಭೋತ್ಸವ ಸಮಾರಂಭದಲ್ಲಿ ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ಪುರಸ್ಕೃತ ಮುತ್ತಣ್ಣ ಪೂಜಾರ ಅವರನ್ನು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಸನ್ಮಾನಿಸಿದರು.
ಹೆತ್ತವರನ್ನು ನಿರ್ಲಕ್ಷಿಸದಿರಿ
ನರೇಗಲ್ಲ: ಮಡದಿ ಬಂದಳೆಂದು ತಂದೆ-ತಾಯಿಯನ್ನು ಮರೆಯಬೇಡಿ. ಮುಪ್ಪಿನ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುವ ಕಾರ್ಯ ಈಗ ಫ್ಯಾಷನ್ ಆಗುತ್ತಿದೆ ಎಂದು ಸಾಂಸ್ಕೃತಿಕ ಮತ್ತು ಚರ್ಚಾಕೂಟದ ಅಧ್ಯಕ್ಷ ಎಸ್.ಎಸ್. ಕಂಠಿ ಹೇಳಿದರು. ಈಚೆಗೆ ಅವರು ಸ್ಥಳೀಯ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಮತ್ತು ಚರ್ಚಾಕೂಟ ಸಂಘದ ಆಶ್ರಯದಲ್ಲಿ ಆಚರಿಸಲಾದ ಭಾವ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಸಿ.ಜಿ. ಹುಡೇದಗಡ್ಡಿ ಮಾತನಾಡಿ, ಜನ್ಮ ಕೊಟ್ಟವರನ್ನು ನಿಮ್ಮ ಜನ್ಮ ಇರುವವರೆಗೂ ಮರೆಯಬೇಡಿ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಅವರು ನಿಮ್ಮ ಕಣ್ಣಿಗೆ ಕಾಣುವ ದೇವರು ಎಂದು ಬಣ್ಣಿಸಿದರು. ನಿಮ್ಮ ಬದುಕನ್ನು ಸುಂದರಗೊಳಿಸಲು, ಬದುಕಿಗೊಂದು ನೆಲೆ ಒದಗಿಸಲು ಕಷ್ಟಪಟ್ಟವರನ್ನು ಮುಪ್ಪಿನ ಕಾಲದಲ್ಲಿ ದೂರವಿಡದೇ ಪ್ರೀತಿ ವಿಶ್ವಾಸಗಳಿಂದ ಚನ್ನಾಗಿ ಸಾಕಬೇಕು ಎಂದರು. ಹಿರಿಯ ಉಪನ್ಯಾಸಕ ಬಿ.ಡಿ. ಕರಡೆಣ್ಣವರ, ಎಂ.ಎಸ್. ಕುಲಕರ್ಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement