ಋತುಚಕ್ರದ ಸಮಸ್ಯೆ: ವಿಷ ಸೇವಿಸಿ ಆತ್ಮಹತ್ಯೆ
ಹಾವೇರಿ: ತನಗಿರುವ ಮಾಸಿಕ ಋತುಚಕ್ರದ ಸಮಸ್ಯೆಯಿಂದ ಬೇಸತ್ತ ಬಾಲೆಯೋರ್ವಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ರಾಣಿಬೆನ್ನೂರಿನ ವಾಗೀಶ ನಗರದಲ್ಲಿ ಜರುಗಿದೆ.
ಬಾಲೆಯನ್ನು ಬಿಂದು ನಾಗರಾಜ ಅಗಡಿ (15) ಎಂದು ಗುರುತಿಸಲಾಗಿದೆ. ನಾಗರಾಜ ಮುರಿಗೆಪ್ಪ ತಳವಾರ ರಾಣಿಬೆನ್ನೂರು ಶಹರ ಠಾಣೆಗೆ ವರದಿ ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.