ದೇವಸ್ಥಾನ ನೆಮ್ಮದಿ ತಾಣ
ಹಿರೇಕೆರೂರು: ದೇವಸ್ಥಾನಗಳು ಮನನೊಂದ ವ್ಯಕ್ತಿಗೆ ಹಾಗೂ ದಣಿದ ಮಾನವನಿಗೆ ನೆಮ್ಮದಿಯ ತಾಣಗಳಾಗಿವೆ ಎಂದು ಚಿತ್ರದುರ್ಗದ ಬಂಜಾರ ಗುರುಪೀಠದ ಬಾಪು ಸೇವಾಲಾಲಾ ಸರ್ದಾರ ಸ್ವಾಮಿಗಳು ತಿಳಿಸಿದರು.
ತಾಲೂಕಿನ ಪರ್ವತ ಸಿದ್ಗೇರಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಸೇವಾಲಾಲ್ ಸಮುದಾಯ ಭವನದ ಕಾಮಗಾರಿಗೆ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಲೂರಿನ ಬಂಜಾರ ಸಮಾಜದ ಶ್ರೀಗಳು ಮಾತನಾಡಿದರು. ಅತಿಥಿಗಳಾಗಿ ಜಿಪಂ ಸದಸ್ಯೆ ಶಾಂತಮ್ಮ ಹಾದಿಮನಿ, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಯು.ಬಿ. ಬಣಕಾರ, ರುದ್ರಪ್ಪ ಲಮಾಣಿ, ಗ್ರಾಪಂ ಅಧ್ಯಕ್ಷ ಕುಬೇರಪ್ಪ ಕರಿಯಣ್ಣನವರ, ಪ್ರಭುಗೌಡ ಗುಬ್ಬಿ, ವಿಜಯ ಮಡಿವಾಳರ, ವೀರಭದ್ರಪ್ಪ ದ್ಯಾವಕ್ಕಳವರ, ಆರ್.ಎಸ್. ಮಲ್ಲೂರ, ಕೆ. ಷಹಜಹಾನ, ಖನ್ನಿನಾಯ್ಕ ಗುಳೇದಹಳ್ಳಿ, ಬಸ್ಯಾನಾಯ್ಕ ಲಮಾಣಿ, ಲಕ್ಷಣನಾಯ್ಕ ಲಮಾಣಿ, ದೇವೇಂದ್ರಪ್ಪ ನಾಯಕ ಇದ್ದರು.