ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಿಷ್ಠರಿಗೆ ಟಿಕೆಟ್ ನೀಡಲಾಗಿದೆ

Rashmi Kasaragodu
Updated On : 26 Feb 2013, 10:53 am

ಶಿಗ್ಗಾಂವಿ: ಪುರಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಳನ್ನು ಪಕ್ಷಾಂತರಿಗಳಿಗೆ ಕೊಟ್ಟಿರುವ ಕುರಿತಂತೆ ಹಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ದಯಾನಂದ ಅಕ್ಕಿ ಮತ್ತು ರವಿ ಗುಡಸಲಮನಿ ಅಧಿಕೃತವಾಗಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಕಾಂಗ್ರೆಸ್‌ಗೆ ಸೇರಿದ್ದಾರೆ ಎಂಬುದು ಗೊತ್ತಿರಲಿ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಟಿಕೆಟ್ ಮಾರಿಕೊಂಡಿದ್ದಾರೆ ಎಂಬುದು ಶುದ್ಧ ಸುಳ್ಳು. ಒಂದು ವೇಳೆ ಟಿಕೆಟ್ ಮಾರಾಟ ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಟಿಕೆಟ್ ಸಿಗದ್ದಕ್ಕೆ ಹತಾಶೆಯಿಂದ ಇಲ್ಲ-ಸಲ್ಲದ ಅರೋಪ ಮಾಡುವುದು ಸರಿಯಲ್ಲ. ಮಾಜಿ ಶಾಸಕರು ಹಾಗೂ ಅವರ ಹಿಂಬಾಲಕರು ಕಾಂಗ್ರೆಸ್ ಹಾಳು ಮಾಡಿದ್ದಾರೆ ಎಂಬ ಆರೋಪ ಸರಿಯಲ್ಲ. ಪಕ್ಷದಲ್ಲಿದ್ದು ಈ ರೀತಿ ಹೇಳಿಕೆ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು. ಇದು ಕಾಂಗ್ರೆಸ್ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ. ಇದರಿಂದ ನಿಮ್ಮ ಮೇಲೆ ಸೂಕ್ತ ಕ್ರಮಕ್ಕಾಗಿ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಿರಿಯ ಮುಖಂಡರ ಸಮ್ಮುಖದಲ್ಲಿ ಆದ ತೀರ್ಮಾನದಂತೆ ಗೆಲ್ಲುವ ಅಭ್ಯರ್ಥಿಗಳಿಗೆ ಮತ್ತು ನಿಷ್ಠರಿಗೆ ಟಿಕೆಟ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭ ನಾಗಪ್ಪ ತಿಪ್ಪಕ್ಕನವರ, ಜಿಲ್ಲಾ ಎಸ್ಸಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಹನುಮರಡ್ಡಿ ನಡುವಿನಮನಿ, ಮೌಲಾಲಿ ಧಾರವಾಡ, ಪ್ರದೀಪ ಗಿರಡ್ಡಿ, ಪ್ರಕಾಶ ಬಂಕಣ್ಣವರ, ಗುಡ್ಡಪ್ಪ ಜಲ್ಲಿ, ಎನ್.ಸಿ. ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement