ಮದ್ಯಮಾರಾಟ ನಿಷೇಧ
ಹಾವೇರಿ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಮುನ್ನಾ ದಿನ ಮಾ. 6ರ ಸಂಜೆ 6ರಿಂದ ಮಾ. 8ರ ಸಂಜೆ 6ರ ವರೆಗೆ, ಮಾ. 11ರ ಬೆಳಗ್ಗೆ 6ರಿಂದ 12ರಂದು ಬೆಳಗ್ಗೆ 6 ಗಂಟೆವರೆಗೆ ಹಾವೇರಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ, ಶೇಖರಣೆ ಹಾಗೂ ಮದ್ಯಪಾನವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಚ್.ಜಿ. ಶ್ರೀವರ ಆದೇಶ ಹೊರಡಿಸಿದ್ದಾರೆ. ಬಿಯರ್ ಬಾರ್ಗಳು, ಕ್ಲಬ್ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಸಹ ಆದೇಶಿಸಲಾಗಿದ್ದು, ಈ ದಿವಸಗಳನ್ನು ಸೂಕ್ಷ್ಮ ದಿವಸಗಳೆಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.