ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಕಾಂಗ್ರೆಸ್‌ಗೆ ಪಾಠ ಕಲಿಸುವೆ: ಮೊಮೀನ

Rashmi Kasaragodu
Updated On : 27 Feb 2013, 11:07 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಫೆ.26
ಕಳೆದ 20 ದಿನಗಳಿಂದ ಕಾಂಗ್ರೆಸ್ ಪಕ್ಷದಿಂದ 8 ಜನ ಅಲ್ಪಸಂಖ್ಯಾತರಿಗೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದ ಮಾಜಿ ಸಚಿವ ಕೆ.ಬಿ. ಕೋಳಿವಾಡ ನಂತರ ಕೇವಲ 5 ಜನರಿಗೆ ಮಾತ್ರವೇ ಟಿಕೆಟ್ ನೀಡಿದ್ದು ಇದು ನಂಬಿಕೆ ದ್ರೋಹವಾಗಿದೆ.
ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠಕಲಿಸುವುದಾಗಿ ಅಂಜುಮನ್ ಸಂಸ್ಧೆಯ ಅನ್ವರಸಾಬ ಮೊಮೀನ ಹೇಳಿದರು.
ಈ ಕುರಿತಂತೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಅಲ್ಪಸಂಖ್ಯಾತರನ್ನು ಹೊಂದಿರುವ ಇಲ್ಲಿ ನಮ್ಮನ್ನು ಕೇವಲ ಮೆಟ್ಟಿಲುಗಳಾಗಿ ಮಾತ್ರವೇ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.  ಪಕ್ಷದಲ್ಲಿ ಇತರ ಮುಖಂಡಗರಿಗೆ ಮರ್ಯಾದೆ ಇಲ್ಲದಂತೆ ವರ್ತಿಸುವುದರಿಂದ ಕಾರ್ಯಕರ್ತರು ಬೇಸತ್ತಿದ್ದಾರೆಂಂದು ದೂರಿದರು.
ಸಭೆಯಲ್ಲಿ ಅತ್ತಾವುಲ್ಲಾ ಡೊಗ್ಗಳ್ಳಿ, ಜಾಕೀರಹುಸೇನ ನಂದಗಾಂವ, ಕಲಂದರ ನಂದಗಾಂವ, ಮೆಹಬೂಬ ಪಟೇಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement