ಯುವತಿ ನಾಪತ್ತೆ: ದೂರು
ಹಾವೇರಿ: ಕಾಲೇಜಿಗೆಂದು ಹೋದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಹಿರೇಕೆರೂರು ತಾಲೂಕಿನ ಇಂಗಳಗೊಂದಿಯಲ್ಲಿ ನಡೆದಿದೆ. ಕಾಣೆಯಾದ ಯುವತಿಯನ್ನು ಶ್ರವಣಕುಮಾರಿ ರವಿ ಹೊಗಿಸೊಪ್ಪಿನವರ (19) ಎಂದು ಗುರುತಿಸಲಾಗಿದೆ. ಈಕೆ ತನ್ನ ಗ್ರಾಮ ಇಂಗಳಗೊಂದಿಯಿಂದ ಹಿರೇಕೆರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿತ್ಯ ಹೋಗಿ ಬರುತ್ತಿದ್ದಳು. ಆದರೆ ಸೋಮವಾರ ಹೋದವಳು ತಿರುಗಿ ಬಂದಿಲ್ಲ ಎಂದು ಅವಳ ತಂದೆ ರವಿ ಬಸಪ್ಪ ಹೊಗಿಸೊಪ್ಪಿನವರ ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.