ಸಾರಿಗೆ ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಹಾವೇರಿ: ರಾಜ್ಯ ಸಾರಿಗೆ ಬಸ್ಸೊಂದು ಜನನಿಬಿಡ ಸ್ಥಳದಲ್ಲೇ ವೇಗವಾಗಿ ಬಂದ ಪರಿಣಾಮ ಬೈಕ್ ಹಾಗೂ ಐಷರ್ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ತೀವ್ರ ಗಾಯಗೊಂಡ ಘಟನೆ ರಾಣಿಬೆನ್ನೂರಿನ ಸಂಗಮ ಸರ್ಕನ್ನಲ್ಲಿ ನಡೆದಿದೆ. ಮೃತರನ್ನು ಕರಬಸಪ್ಪ ಮಲ್ಲೇಶಪ್ಪ ಸೊಪ್ಪಿನ (40) ಎಂದು ಗುರುತಿಸಲಾಗಿದೆ. ಮೃತನ ಪತ್ನಿ ಗೀತಾ ಕರಬಸಪ್ಪ ಸೊಪ್ಪಿನ ಹಾಗೂ ಅಭಿಷೇಕ ಶಿವಯೋಗಿ ಯಲಿಗಾರ ಗಾಯಗೊಂಡಿದ್ದು, ತಪ್ಪಿತಸ್ಥ ಸಾರಿಗೆ ಬಸ್ ಚಾಲಕ ವಸಂತ ತಿಪ್ಪಣ್ಣ ಓಲೇಕಾರ ವಿರುದ್ಧ ಸಚಿನ ರುದ್ರಪ್ಪ ದಾನಪ್ಪನವರ ದೂರು ನೀಡಿದ್ದಾರೆ. ರಾಣಿಬೆನ್ನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೌವ್ ಸಿಡಿದು ಗೃಹಿಣಿ ಸಾವು
ಹಾವೇರಿ: ಅಡುಗೆಗೆ ಬಳಸುತ್ತಿದ್ದ ಸೀಮೆಎಣ್ಣೆ ಸ್ಟೌವ್ ಸಿಡಿದು ಗೃಹಿಣಿಯೋರ್ವಳು ಮೃತಪಟ್ಟ ಘಟನೆ ಹಾನಗಲ್ಲ ತಾಲೂಕು ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಮೃತಳನ್ನು ರೀಹಾನಾಬಾನು ಅಬ್ದುಲ್ ಖಾದರ ಹೀರಳ್ಳಿ (30) ಎಂದು ಗುರುತಿಸಲಾಗಿದೆ. ಸ್ಟೌವ್ ಸಿಡಿದ ಪರಿಣಾಮ ಅವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ಪತಿ ಅಬ್ಡುಲ್ ಖಾದರ ಬೆಂಕಿ ನಂದಿಸಲು ಹೋಗಿ ತನ್ನೆರೆಡೂ ಕೈಗಳನ್ನೂ ಸುಟ್ಟುಕೊಂಡಿದ್ದು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತಂತೆ ಅಬ್ದುಲ್ ಖಾದರ ಮೌಲಾಸಾಬ ಹಿರಳ್ಳಿ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.