ಕೆಜೆಪಿ ಅಭ್ಯರ್ಥಿ ಆಯ್ಕೆ ಮಾಡಿ: ಬಣಕಾರ
ಹಿರೇಕೆರೂರು: ಪಟ್ಟಣ ಪಂಚಾಯಿತಿಯ ಅಧಿಕಾರ ಕೈವಶ ಮಾಡಿಕೊಳ್ಳಲು ಅತ್ಯುತ್ತಮ ಅವಕಾಶ ಒದಗಿ ಬಂದಿದೆ. ಸಾಮಾಜಿಕ ನ್ಯಾಯದಡಿ ಎಲ್ಲ ಸಮುದಾಯಗಳ ಹಿತ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮಾಜಿ ಶಾಸಕ ಯು.ಬಿ. ಬಣಕಾರ ಮನವಿ ಮಾಡಿದರು. ಇಲ್ಲಿನ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ 6ನೇ ವಾರ್ಡಿನ ಕೆಜೆಪಿ ಅಭ್ಯರ್ಥಿ ಶಿವಕುಮಾರ ತಿಪ್ಪಶೆಟ್ಟಿ ಪರ ಮತ ಯಾಚಿಸಿದ ಯು.ಬಿ. ಬಣಕಾರ, 3 ಹಾಗೂ 9ನೇ ವಾರ್ಡಿನಲ್ಲಿ ಕೆಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಕೆಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹೇಶ ಗುಬ್ಬಿ, ಅಭ್ಯರ್ಥಿ ಶಿವಕುಮಾರ ತಿಪ್ಪಶೆಟ್ಟಿ, ಅಜಮತ್ ಮುಲ್ಲಾ, ಗುಲಾಬ್ಶಾ ಮಕಾಂದಾರ, ಸಿ.ಎಸ್. ಪೇತಕ್ಕನವರ, ಮಹೇಂದ್ರ ಬಡಳ್ಳಿ, ಮದನ್ ಶಾ ಮಕಾಂದಾರ, ಸಿದ್ದನಗೌಡ ನರೇಗೌಡ್ರ, ಜಯಪ್ಪ ಬಂಗೇರ, ರಾಮು ಚಿಗಮರದ, ಬಸವಣ್ಣೆಪ್ಪ ಕಾರಗಿ, ನಿಂಗಪ್ಪ ದಂಡಗಿಹಳ್ಳಿ, ಈರನಗೌಡ ತಿಪ್ಪಶೆಟ್ಟಿ, ಗದಿಗೆಪ್ಪ ತಿಪ್ಪಶೆಟ್ಟಿ, ಅರುಣ ಹಮ್ಮಿಗಿ, ಮುತ್ತಣ್ಣ ಹಳ್ಳೂರು, ಅನಿಲ್ ಪಾಟೀಲ, ಶಿವಲಿಂಗಪ್ಪ ಕುಬಸದ, ನಟರಾಜ ಪಾಟೀಲ, ಶಫಿ ಖಾದ್ರಿ, ರಿಜ್ವಾನ್ ಕೊಂಡವಾಡ ಮೊದಲಾದವರು ಹಾಜರಿದ್ದರು.