ಪ್ರಾಚೀನ ಸ್ಮಾರಕ ಪರಂಪರೆ ಪ್ರತೀಕ: ಡಾ ಭೋಜರಾಜ
ಹಾವೇರಿ: ಪ್ರಾಚೀನ ಸ್ಮಾರಕಗಳು ಕೇವಲ ಇತಿಹಾಸದ ಆಕರಗಳಾಗಿರದೇ ನಮ್ಮ ಪರಂಪರೆ ಪ್ರತೀಕಗಳಾಗಿವೆ. ಅವುಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಡಾ. ಭೋಜರಾಜ ಪಾಟೀಲ ತಿಳಿಸಿದರು. ನಗರದ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನಲ್ಲಿ ಜಿಲ್ಲಾ ಪರಂಪರೆ ಕೂಟದ ಆಶ್ರಯದಲ್ಲಿ ಪರಂಪರೆ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಜನರಲ್ಲಿನ ಅಜ್ಞಾನ, ಅಂಧಾನುಕರಣೆ, ಮೂಢನಂಬಿಕೆಗಳೇ ಸ್ಮಾರಕಗಳ ನಾಶಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಿಧಿ ಇದೆ ಎಂಬ ದುರಾಸೆಯಿಂದ ದೇವಾಲಯಗಳನ್ನು ಹಾಳುಗೆಡುವುತ್ತಿರುವುದು ವಿಷಾದನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ ಎಸ್.ಕೆ. ನಾಶಿ ಮಾತನಾಡಿ, ಆಧುನಿಕ ಬದುಕಿನಲ್ಲಿ ವಿವಿಧ ಕೌಶಲ್ಯಗಳು ಅಗತ್ಯವಾಗಿದ್ದರೂ ಪ್ರಾಚೀನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋದಲ್ಲಿ ಮಾತ್ರ ನಮ್ಮ ಪರಂಪರೆ ಉಳಿಸಲು ಸಾಧ್ಯ ಎಂದರು. ನಾಗರತ್ನಾ ಪ್ರಾರ್ಥಿಸಿದರು. ಪ್ರೊ. ಎಂ. ನಾಗರಾಜ ಸ್ವಾಗತಿಸಿದರು. ಪರಂಪರೆ ಕೂಟದ ಸಂಚಾಲಕ ಶಿವಯೋಗಿ ಕೋರಿಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು. ಚೇತನಾ ಪರಪ್ಪನವರ ವಂದಿಸಿದರು. ಸಬರಿನ್ ತಾಜ್ ಡಾಲಾಯತ್ ನಿರ್ವಹಿಸಿದರು.