ಬಿಜೆಪಿ ಬೆಂಬಲಿಸಿ ಜಿತೇಂದ್ರ ನಾಮಪತ್ರ ವಾಪಸ್
ಬ್ಯಾಡಗಿ: ಪಟ್ಟಣದ 9ನೇ ವಾರ್ಡ್ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿತೇಂದ್ರ ಸುಣಗಾರ ಬಿಜೆಪಿ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಬುಧವಾರ ನಾಮಪತ್ರ ಹಿಂಪಡೆದರು. ಬಿಜೆಪಿ ಕಾರ್ಯಾಲಯದಲ್ಲಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಜಿತೇಂದ್ರ ಸುಣಗಾರ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಮಾ. 7ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಮನೂರಪ್ಪ ಉಜನಿ ಅವರನ್ನು ಬೆಂಬಲಿಸುವಂತೆ ಜಿತೇಂದ್ರ ಮನವಿ ಮಾಡಿದರು. ಮುಖಂಡರಾದ ರಾಮಣ್ಣ ಉಕ್ಕುಂದ, ಜಯಣ್ಣ ಮಲ್ಲಿಗಾರ, ವಿರೂಪಾಕ್ಷಪ್ಪ ಬಳ್ಳಾರಿ, ಸೋಮು ಮಾಳಗಿ, ಬಿ.ಬಿ. ಬಂಗೇರ, ಎಂ.ಆರ್. ಭದ್ರಗೌಡ್ರ, ಶಾಂತಪ್ಪ ಅರ್ಕಾಚಾರಿ, ಮುತ್ತು ಬೋವಿ, ಮಂಜುನಾಥ ಜಾಧವ, ಪರಶುರಾಮ ಯಂಕಣ್ಣನವರ ಇದ್ದರು.