ಸ್ವಾವಲಂಬಿ ಜೀವನಕ್ಕೆ ವೃತ್ತಿಪರ ಕೋರ್ಸ್ ಅಗತ್ಯ: ಚಿನ್ನಪ್ಪನವರ
ರಾಣಿಬೆನ್ನೂರು: ಎಸ್ಸೆಸ್ಸೆಲ್ಸಿ ನಂತರ ಸ್ವಾವಲಂಬಿ ಜೀವನಕ್ಕೆ ವೃತ್ತಿಪರ ಕೋರ್ಸುಗಳು ಅಗತ್ಯ ಎಂದು ರೇಣುಕಾಂಬ ಐಟಿಐ ಪ್ರಾಚಾರ್ಯ ಎ.ಬಿ. ಚಿನ್ನಪ್ಪನವರ ತಿಳಿಸಿದರು. ತಾಲೂಕಿನ ಹೊಸಹುಲಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತಸಲಹಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಸ್ವಾವಲಂಬಿಗಳ ಪಾತ್ರ ಮಹತ್ವದಾಗಿದೆ. ಸಣ್ಣ ಕೈಗಾರಿಕೆ, ಅಟೋಮೊಬೈಲ್, ಟೇಲರಿಂಗ್, ಕಂಪ್ಯೂಟರ್, ರಿವೈಂಡಿಂಗ್ ಇತ್ಯಾದಿಗಳು ದೊಡ್ಡ ಕೈಗಾರಿಕೋದ್ಯಮಗಳಿಗೆ ಸಹಕಾರಿಯಾಗಿವೆ ಎಂದರು. ಮುಖ್ಯಾಧ್ಯಾಪಕಿ ಬಿ.ಪಿ. ಕಲ್ಪಿತರಾಣಿ ಅಧ್ಯಕ್ಷತೆ ವಹಿಸಿದ್ದರು. ಕಿರಣ ಪಾಟೀಲ, ಪ್ರಕಾಶ ನಾಯ್ಕ ಉಪನ್ಯಾಸ ನೀಡಿದರು. ದೀಪಾ ಇಚ್ಚಂಗಿ ಕೇಂದ್ರದಿಂದ ದೊರೆಯಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಂಯೋಜಕಿ ಚಂಪಾ ಹಿರೇಮಠ, ಎಫ್.ಕೆ. ಬಿಸಲಹಳ್ಳಿ, ಸಿ.ಬಿ. ಗುರ್ಜೇರ, ಜಿ.ಡಿ. ದ್ಯಾವಕ್ಕಳವರ ಉಪಸ್ಥಿತರಿದ್ದರು. -