ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

2013-14 ಬಜೆಟ್ ಮಾತು

Lingaraj Badiger
Updated On : 1 Mar 2013, 11:09 am

ನಮ್ಮ ಕೃಷಿಕರು ವಿಶ್ವಕ್ಕೆ ಅನ್ನ ಹಾಕುವ ಶಕ್ತಿಯಿದ್ದರೂ ಕೃಷಿಯಲ್ಲಿ ತಂತ್ರಜ್ಞಾನ ಬೆಳವಣಿಗೆಯಿಂದ ಆಹಾರೋತ್ಪಾದನೆ ಕಡಿಮೆಯಾಗಿದ್ದು, ಪ್ರಸಕ್ತ ಬಜೆಟ್‌ನಲ್ಲಿ ಆಹಾರ ಭದ್ರತೆಗೆ ರು. 10 ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ.
-ಚಿಕ್ಕಪ್ಪ ಛತ್ರದ, ರೈತ ಮುಖಂಡ

ದೆಹಲಿ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ರು. 1 ಸಾವಿರ ಕೋಟಿ ನಿರ್ಭಯಾ ನಿಧಿ ಘೋಷಿಸಿದೆ. ಪ್ರಾಣ ಕಳೆದುಕೊಂಡ ಮಹಿಳೆ ಕುಟುಂಬಕ್ಕೆ ಕೇಂದ್ರ ಬಜೆಟ್‌ನಲ್ಲಿ ಯೋಜನೆಯ ಲಾಭ ವಿಸ್ತರಿಸಬೇಕಾಗಿತ್ತು.
-ಸಂಕಮ್ಮ ಸಂಕಣ್ಣನವರ, ಸಾಹಿತಿ

ಆದ್ಯತಾ ವಲಯಗಳಾದ ರಕ್ಷಣೆ, ಗೃಹ, ಶಿಕ್ಷಣ, ನೀರಾವರಿ, ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ ಖಾತೆಗಳಿಗೆ ಅನುದಾನ ಹೆಚ್ಚಿಸಿರುವುದು ಪ್ರಗತಿ ದೃಷ್ಟಿಯಿಂದ ಸೂಕ್ತ. ಯುವ ಸಮುದಾಯ ಉದ್ಯೋಗ ಸೃಷ್ಟಿಗೆ ಪೂರಕ ಯೋಜನೆ ಬೇಕಿತ್ತು.
-ರಾಜು ಮೋರಿಗೇರಿ

2-3 ವರ್ಷಗಳಿಂದ ದ. ಭಾರತ ರಾಜ್ಯಗಳ ರೈತರು ಬರಗಾಲದಿಂದ ಕಂಗೆಟ್ಟಿದ್ದಾರೆ. ಕೇಂದ್ರ ವಿತ್ತ ಸಚಿವರು ರಾಸಾಯನಿಕ ಗೊಬ್ಬರ ಮೇಲೆ ಸರ್‌ಚಾರ್ಜ್ ಹಾಕಿರುವುದು ಎಷ್ಟು ಸರಿ? ಸಾಲಮನ್ನಾ ಮಾಡದೇ, ರೈತ ವಿರೋಧಿ ಬಜೆಟ್ ಆಗಿದೆ.
-ರಾಮಣ್ಣ ಬೊಮ್ಮೊಜಿ, ಜೆಡಿಎಸ್

ಮನಮೋಹನ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ಯೋಜನೆ ರೂಪಿಸಿಲ್ಲ. ಬರದಿಂದ ರಾಜ್ಯಗಳು ತತ್ತರಿಸಿವೆ. ರೈತರ ಸಾಲಮನ್ನಾ ಮಾಡಬಹುದಾಗಿತ್ತು. ಮಹಿಳೆಯರಿಗೆ ಯೋಜನೆ ರೂಪಿಸಿ, ಮತಬ್ಯಾಂಕ್‌ಗೆ ಲಗ್ಗೆ ಹಾಕಲಾಗಿದೆ.
-ಯು.ಬಿ.ಬಣಕಾರ. ಮಾಜಿ ಶಾಸಕ

ಕೇಂದ್ರ ಬಜೆಟ್ ಪ್ರಾಥಮಿಕ ಶಿಕ್ಷಣಕ್ಕೆ ಒಲವು ತೋರಿದ್ದು, ಉನ್ನತ ಶಿಕ್ಷಣ ಪಡೆದ ಪದವೀಧರರಿಗೆ ಸಾಲಸೌಲಭ್ಯ ನೀಡುವ ಮೂಲಕ ಸ್ವಯಂ ಉದ್ಯೋಗ ಮಾಡಲು ಅನುಕೂಲ ಕಲ್ಪಿಸಲಾಗಿದೆ.
-ಪಿ.ಡಿ.ಬಸನಗೌಡ್ರ, ಹಾವೇರಿ

ಕೇಂದ್ರ ಬಜೆಟ್ ಚುನಾವಣೆ ಗುರಿಯಿಟ್ಟುಕೊಂಡು ಮಂಡನೆಯಾಗಿದೆ. ಮಹಿಳಾ ಮತಗಳ ಮೇಲೆ ಕಣ್ಣಿರಿಸಿದ್ದ ಕಾಂಗ್ರೆಸ್ ಶೇ. 50 ಮಿಸಲಾತಿ ನೀಡಿದೆ. ರು. 1 ಸಾವಿರ ಕೋಟಿ ನಿರ್ಭಯ ಯೋಜನೆ, ದೀರ್ಘಾವಧಿ ಯೋಜನೆಗಳಿಲ್ಲ.
-ಬಸಮ್ಮ ಅಬಲೂರ, ಜಿಪಂ ಸದಸ್ಯೆ

ಬಜೆಟ್‌ನಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜವಾಗಿಲ್ಲ. ಬಡ ಜನರ ಜೀವನ ಕುರಿತಂತೆ ಕಿಂಚಿತ್ತೂ ಯೋಚಿಸಿಲ್ಲ. ಬಜೆಟ್ ಮತಬ್ಯಾಂಕ್ ಗಿಮಿಕ್. ಆಯವ್ಯಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಮಾತ್ರ.
-ಪರಮೇಶಪ್ಪ ಗುಬ್ಬಿ,  ನ್ಯಾಯವಾದಿ

ಕೇಂದ್ರ ಬಜೆಟ್ ಉತ್ತಮವಾಗಿದ್ದು, ಎಲ್ಲ ಅಂಶ ತೊಡಗಿಸುವ ಮೂಲಕ ದೂರದೃಷ್ಠಿ ಹೊಂದಲಾಗಿದೆ. ಸರ್‌ಚಾರ್ಜ್ ಹೆಚ್ಚಿಸಿ ಶ್ರೀಮಂತರಿಂದ ತೆರಿಗೆ ಸಂಗ್ರಹಿಸಿದ್ದು, ಯುವ ಸಮುದಾಯ, ಮಹಿಳಾ ಸಂರಕ್ಷಣೆಗೆ ಒತ್ತು ನೀಡಲಾಗಿದೆ.
-ಸುರೇಶ ಕಡಕೋಳ, ತಂತ್ರಜ್ಞ

ಕೇಂದ್ರ ಬಜೆಟ್ ವಿಷಾದಕರವಾಗಿದ್ದು, ಉತ್ತಮ ಅಂಶಗಳೇ ಇಲ್ಲ. ಕೆಲ ಕಡೆಗಳಲ್ಲಿ ಸರ್‌ಚಾರ್ಜ್ ಹೆಚ್ಚಿಸಿರುವುದು ಬಿಟ್ಟರೇ ಶ್ರೀಮಂತರಿಗೆ, ಮಧ್ಯಮ, ಕೆಳ ವರ್ಗಕ್ಕೆ ಕೊಡುಗೆ ನೀಡಿಲ್ಲ. ಬಜೆಟ್ ಶುದ್ಧ ಚುನಾವಣಾ ಪ್ರಣಾಣಿಕೆ.
-ಪಿ.ಡಿ. ಶಿರೂರ, ಹಾವೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments