ಜಿಲ್ಲಾಧಿಕಾರಿ ಎಚ್.ಜಿ. ಶ್ರೀವರ ನಿವೃತ್ತಿ
ಹಾವೇರಿ: ಮೂರುವರೆ ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ, ಗುರುವಾರ ವಯೋನಿವೃತ್ತಿ ಹೊಂದಿದ ಎಚ್.ಜಿ. ಶ್ರೀವರ, ಜಿಲ್ಲೆಯ ಜನತೆಯ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜ್ಯದ ಮಧ್ಯವರ್ತಿ ಜಿಲ್ಲೆ ಹಾವೇರಿಯಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದ್ದು ಅವಿಸ್ಮರಣೀಯವೆನಿಸಿದೆ. ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ನೆಲೆಬೀಡಾದ ಮತ್ತು ತೀವ್ರತರ ಪ್ರಗತಿಗೆ ಒಡ್ಡಿಕೊಂಡಿರುವ ಈ ಜಿಲ್ಲೆ, ಉತ್ತಮ ಹವಾಮಾನ ಹೊಂದಿದೆ. ಕೃಷಿ ಸಂಪನ್ನವಾಗಿದೆ. ಇಲ್ಲಿನ ಜನಪ್ರತಿನಿಧಿಗಳು, ಸಾರ್ವಜನಿಕರು, ಮಾಧ್ಯಮ ಪ್ರತಿನಿಧಿಗಳು, ಜಿಲ್ಲಾಡಳಿತದ ಸುಗಮ ಕಾರ್ಯನಿರ್ವಹಣೆಗೆ ಸಹಕಾರ ನೀಡಿದ್ದಾರೆ. ಇವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಗದ್ಗದ ಕಂಠದಿಂದ ತಿಳಿಸಿದ್ದಾರೆ.