ಯುವಕರು ಸಶಕ್ತ ಸಮಾಜಕ್ಕೆ ಶ್ರಮಿಸಿ
ಹಾನಗಲ್ಲ: ದುಶ್ಚಟಗಳ ದಾಸರಾಗಿ ನೈತಿಕತೆಯನ್ನು ಮರೆತು ದೇಶದ ಪ್ರಗತಿಗೆ ಮುಳ್ಳಾಗಲು ಮುಂದಾಗಿರುವ ಯುವಶಕ್ತಿ ಜವಾಬ್ದಾರಿ ಅರಿತು ಸಶಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ ಎಂದು ಹೋತನಹಳ್ಳಿ ಸಿದ್ಧಾರೂಢಮಠದ ಸದ್ಗುರು ಶಂಕರಾನಂದ ಶ್ರೀಗಳು ಕರೆ ನೀಡಿದರು.
ತಾಲೂಕಿನ ಅಕ್ಕಿಆಲೂರು ಸರ್ಕಾರಿ ವಸತಿ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಸಿ. ತಿರ್ಲಾಪುರ, ಮಂಡ್ಯ ಜಿಲ್ಲೆಯ ಪ್ರೊಬೇಷನರಿ ಎಸಿ ಶಿವಾನಂದ ಬಿ.ಕರಾಳೆ ಮಾತನಾಡಿದರು. ಸಮಾರಂಭದಲ್ಲಿ ಸವಣೂರಿನ ಪ್ರೊಬೇಷನರಿ ಎಸಿ ಸತೀಶ ಡಿ.ಎಂ., ತಾಲೂಕು ದಂಡಾಧಿಕಾರಿಗಳಾದ ರಮೇಶ ಕೋನರೆಡ್ಡಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ಗಡಬಳ್ಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಬಿ.ವೈ. ಬಂಡಿವಡ್ಡರ, ಸಿಡಿಪಿಓ ಬಿ.ಆರ್. ಶೆಟ್ಟರ, ಸರ್ಕಾಲ್ ಇನ್ಸಪೆಕ್ಟರ್ ಬಿ.ಎಸ್. ಮಂಟೂರ, ಪುರಸಭೆ ಮುಖ್ಯಾಧಿಕಾರಿ ಎ.ರಮೇಶ, ಹಾವೇರಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಗದೀಶ ಹೆಬ್ಬಳ್ಳಿ, ಹುಬ್ಬಳ್ಳಿಯ ಎಫ್.ಆರ್. ಮರಡಿಯವರ, ಬ್ಯಾಡಗಿ ಎಪಿಎಂಸಿ ನಿವೃತ್ತ ಅಧೀಕ್ಷಕ ನಿಂಗಪ್ಪ ಕೇಸರಿ, ಉಪತಹಸೀಲ್ದಾರ್ ನಾಗೇಂದ್ರ ಹೊನ್ನಳ್ಳಿ, ಜಗದೀಶ ಎಸ್‌ಐ ವೈ.ಕೆ. ಆಲೂರ, ಛಾಯಾ ಎನ್.ಕೆ., ಅನ್ನಪೂರ್ಣ ಅಪ್ಪಿನಬೈಲ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಪರಮೇಶ್ವರ ಬಿ.ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು.
ಹನುಮಂತ ಬಂಡಿವಡ್ಡರ ಮತ್ತು ಪ್ರೇಮಾ ಲಮಾಣಿ ನಿರೂಪಿಸಿದರು. ಲೋಕೇಶ ನಲ್ಲೆಬೀಡ ವಂದಿಸಿದರು.