ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ವರ್ಗಾಯಿಸಿ
ಹಾವೇರಿ: ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಕೇಳಿದರೂ ಸಹ ತುಂಗಾ ಮೇಲ್ದಂಡೆ ಯೋಜನೆಯ ರಟ್ಟಿಹಳ್ಳಿ ಸಹಾಯಕ ಕಾರ್ಯನಿರ್ವಾಹಕಾಧಿಕಾರಿ ವಿಳಂಬ ನೀತಿ ಅನುಸರಿಸುತ್ತಿದ್ದು, ತಕ್ಷಣ ವರ್ಗಾವಣೆ ಮಾಡಬೇಕೆಂದು ಕಡೂರು ಗ್ರಾಮದ ರೈತ ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ತಾಲೂಕಿನ ಕಡೂರು ಗ್ರಾಮ ಬಹುತೇಕ ಕೃಷಿಕರಿಂದ ತುಂಬಿದ್ದು, ಬರಗಾಲದ ಹಿನ್ನಲೆಯಲ್ಲಿ ಗ್ರಾಮದಲ್ಲಿ ದನ-ಕರುಗಳಿಗೆ ಕುಡಿಯುವ ನೀರಿಗೆ ಹಾಗೂ ಜನತೆಗೆ ದೈನಂದಿನ ಬಳಕೆಗೆ ತೀವ್ರ ಅಡಚಣೆಯಾಗಿದೆ.
ಈಗಾಗಲೇ ಕಡೂರು ಗ್ರಾಮದ ಅಂಚಿನಲ್ಲಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ಹರಿದು ಹೋಗಿದ್ದು, ಗ್ರಾಮದಲ್ಲಿ ನಾಲ್ಕು ದೊಡ್ಡ ಕೆರಗೆಳಿವೆ. ಆ ಕೆರೆಗಳು ಮುಖ್ಯ ಕಾಲುವೆಯಿಂದ ಅರ್ಧ ಕಿ. ಮೀಟರ್ ದೂರದಲ್ಲಿವೆ.ಬರಗಾಲದ ಬವಣೆ ನೀಗಿಸಲು ನೀರು ತುಂಬುವಂತೆ ತುಂಗಾ ಮೇಲ್ದಂಡೆ ಕಾರ್ಯನಿರ್ವಾಹಕಾಧಿಕಾರಿ ವಿ.ಎಚ್. ಶ್ರೀಧರ ಎಂಬುವರಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸಹ ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆ. ಈ ಅಧಿಕಾರಿ ದುರ್ವರ್ತನೆ ಮಿತಿಮಿರಿದ್ದು, ರೈತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಕಾರಣ ಇಂಥಹ ಉದ್ದಟತನದ ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡುವುರೊಂದಿಗೆ ಕಡೂರು ಗ್ರಾಮದ ನಾಲ್ಕು ಕರೆಗೆಳಿಗೆ ನೀರು ತುಂಬಿಸುವ ಮೂಲಕ ಗ್ರಾಮದ ನೀರಿನ ಬವಣೆಯನ್ನು ನೀಗಿಸಬೇಕು ಎಂದು ರೈತ ಮುಖಂಡರಾದ ಮಲ್ಲೇಶಪ್ಪ ಶಿರಗೇರಿ, ಚಂದ್ರಗೌಡ ಕರೇಗೌಡ್ರ, ಎಸ್.ಎಸ್. ಲಕ್ಕನಗೌಡ್ರ, ಎಸ್.ಎಸ್. ಮೇಗಳಮನಿ, ಎಂ.ಎಂ. ಶಿರಗಂಬಿ ಮೊದಲಾದವರು ಆಗ್ರಹಿಸಿದ್ದಾರೆ.