ಇಂದು ವಸ್ತು ಪ್ರದರ್ಶನ, ಮೇಳ
ಹಾವೇರಿ: ಜಿಲ್ಲಾಡಳಿತ, ಜಿಪಂ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಸ್ತ್ರೀ-ಶಕ್ತಿ ಸಂಘ ಸದಸ್ಯರು, ಮಹಿಳಾ ಉದ್ದಿಮೆದಾರರು ಉತ್ಪಾದಿಸಿದ ವಸ್ತುಗಳ ವಸ್ತುಪ್ರದರ್ಶನ-ಮಾರಾಟ ಮೇಳ ಉದ್ಘಾಟನೆ ಜ. 22ರಂದು ಬೆಳಗ್ಗೆ 11ಕ್ಕೆ ಹುಕ್ಕೇರಿಮಠದ ಮಹಿಳಾ ಕಾಲೇಜು ಆವರಣದಲ್ಲಿ ಜರುಗಲಿದೆ. ಸದಾಶಿವ ಶ್ರೀ ಉದ್ಘಾಟಿಸುವರು. ಡಿಸಿ ಶ್ರೀವರ ಅಧ್ಯಕ್ಷತೆ, ಜಿಪಂ ಸಿಇಓ ಉಮೇಶ ಕುಸುಗಲ್ಲ, ಎಸ್ಪಿ ಚೇತನಸಿಂಗ್ ರಾಥೋರ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮುದ್ದುಮೋಹನ್, ಜಿಪಂ ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಪಾಲ್ಗೊಳ್ಳುವರೆಂದು ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಚನ್ಮಮ್ಮ ಹೊಳಿಹೊಸೂರು ತಿಳಿಸಿದ್ದಾರೆ.