ಗಣರಾಜ್ಯೋತ್ಸವಕ್ಕೆ ಭರದ ಸಿದ್ಧತೆ
ರಾಣಿಬೆನ್ನೂರು: ಜಿಪಂ ಹಾವೇರಿ, ತಾಲೂಕಾಡಳಿತ, ತಾಪಂ, ನಗರಸಭೆ, ಎಪಿಎಂಸಿ ರಾಣಿಬೆನ್ನೂರು ಆಶ್ರಯದಲ್ಲಿ ಜ. 26ರಂದು ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದ್ದಾರೆ.
ಜ. 26ರಂದು ಗಣರಾಜ್ಯೊತ್ಸವದ ನಿಮಿತ್ತ ಬೆಳೆಗ್ಗೆ 7ರಿಂದ 7-30ರ ವರೆಗೆ ನಗರದ ವಿವಿಧ ಸಂಘ-ಸಂಸ್ದೆಗಳಲ್ಲಿ, ಸರಕಾರಿ ಕಾರ್ಯಾಲಯಗಳಲ್ಲಿ ರಾಷ್ಟ್ರ ದ್ವಜಾರೋಹಣ ನಡೆಯುವುದು. 8 ಗಂಟೆಗೆ ಅಶೋಕ ವೃತ್ತದಲ್ಲಿ ನಗರಸಭೆ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ ದ್ವಜಾರೋಹಣ ನೆರವೇರಿಸುವರು.
9-30ಕ್ಕೆ ನಗರಸಭೆ ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ನಡೆಯುವ ಧ್ವಜಾರೋಹಣವನ್ನು ತಹಸೀಲ್ದಾರ್ ಸತೀಶಕುಮಾರ ಡಿ.ಎಂ. ನೆರವೇರಿಸುವರು. ಶಾಸಕ ಜಿ. ಶಿವಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ಶಾರದಾ ಲಮಾಣಿ, ಎಪಿಎಂಸಿ ಅಧ್ಯಕ್ಷ ಸಣ್ಣ ತಮ್ಮಣ್ಣ ಬಾರ್ಕಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಈರಣ್ಣ ಅಂಗಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಗೌಡ ಪಾಟೀಲ, ಟಿಎಪಿಎಂಎಸ್ ಅಧ್ಯಕ್ಷ ಹನುಮಂತಪ್ಪ ಮುಡದ್ಯಾವಣ್ಣನವರ, ಬಿಇಓ ಕೆ. ಲಕ್ಷ್ಮಣ, ನಗರಸಭೆ ಪೌರಾಯುಕ್ತ ಎಂ.ಎಂ. ಕರೆಭೀಮಣ್ಣನವರ, ತಾಪಂ ಇಓ ಎಸ್. ಉಜ್ಜನಪ್ಪ, ಪೊಲೀಸ್ ಉಪ ಅಧೀಕ್ಷಕ ಜಯಪ್ರಕಾಶ ಸೇರಿದಂತೆ, ವಿವಿಧ ಇಲಾಖೆ ಮುಖ್ಯಸ್ಧರು ಮತ್ತು ಸಿಬ್ಬಂದಿ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.