ಫೆ. 2ರಂದು ಮುಕ್ತ ವಾಲಿಬಾಲ್ ಪಂದ್ಯಾವಳಿ (ಸುದ್ದಿ ಸಂಕ್ಷೇಪ)
ಶಿಗ್ಗಾಂವಿ: ತಾಲೂಕಿನ ಕಬನೂರ ಗ್ರಾಮದ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಫೆ. 2ರಂದು ಕಬನೂರಿನ ಗುಂಜಳ ಪ್ರೌಡಶಾಲೆ ಮೈದಾನದಲ್ಲಿ ಜರುಗಲಿದೆ. ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ದುರುಗಪ್ಪ ಮತ್ತಿಗಟ್ಟಿ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಜಿಪಂ ಸದಸ್ಯ ಬಿ.ಟಿ. ಇನಾಮತಿ, ಶಶಿಧರ ಹೊಣ್ಣನವರ, ತಾಪಂ ಸದಸ್ಯ ತಿಪ್ಪಣ್ಣ ಸಾಥಣ್ಣವರ, ಎಪಿಎಂಸಿ ಸದಸ್ಯ ಶಿವಾನಂದ ಮ್ಯಾಗೇರಿ ಪಾಲ್ಗೊಳ್ಳುವರು. ಆಸಕ್ತ ತಂಡಗಳು ವಿವರಗಳಿಗೆ ಕಲ್ಮೇಶಗೌಡ, ಮೊ. 7411356968, ಶಹಜಾನ್, ಮೊ. 8722770143, ಚೇತನ, ಮೊ. 9845233083, ರಘುವೀರ, ಮೊ. 9632610634 ಸಂಪರ್ಕಿಸಲು ಕೋರಲಾಗಿದೆ.
ಇಂದು ದತ್ತಿ ಉಪನ್ಯಾಸ
ಶಿಗ್ಗಾಂವಿ: ತಾಲೂಕಿನ ಸದಾಶಿವಪೇಟೆ ಗ್ರಾಮದ ಶರಣ ಬಸವೇಶ್ವರ ದಾಸೋಹ ಮಠದಲ್ಲಿ ಜಿಲ್ಲಾ ಮತ್ತು ತಾಲೂಕು ಕಸಾಪ ದತ್ತಿ ಉಪನ್ಯಾಸ ಜ. 23ರಂದು ಸಂಜೆ 5ಕ್ಕೆ ಜರುಗಲಿದೆ. ಸಾನ್ನಿಧ್ಯವನ್ನು ಶರಣ ಬಸವೇಶ್ವರ ಮಠದ ಶಿವದೇವ ಶರಣರು ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸುವರು. ಎನ್.ಎಸ್. ಚಿಗರಿ ಉದ್ಘಾಟಿಸುವರು. ದತ್ತಿ ದಾನಿಗಳಾಗಿ ವಿಜಯಕುಮಾರ ಲಕ್ಷ್ಮೇಶ್ವರ, ದತ್ತಿ ಉಪನ್ಯಾಸಕರಾಗಿ ಡಾ ಶೇಖರ ಸಜ್ಜನ ಆಗಮಿಸುವರು. ಎಸ್.ಎನ್. ಲಕ್ಷ್ಮೇಶ್ವರ, ಪ್ರೊ ಶ್ರೀಶೈಲ ಹುದ್ದಾರ, ನಾಗರಾಜ ದ್ಯಾಮನಕೊಪ್ಪ, ವೈ.ಜಿ. ತಿಮ್ಮಾಪುರ, ಸಿ.ವಿ. ಮತ್ತಿಗಟ್ಟಿ, ಎಂ.ವಿ. ಗಾಡದ ಪಾಲ್ಗೊಳ್ಳುವರು.
ಬೈಕ್ ಡಿಕ್ಕಿ: ಓರ್ವ ಸಾವು
ಹಾವೇರಿ: ನಿರ್ಲಕ್ಷ್ಯ ಹಾಗೂ ವೇಗವಾಗಿ ಬೈಕ್ ಚಾಲನೆ ಮಾಡಿ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಜರುಗಿದೆ. ಮೃತನನ್ನು ಶಿವಪುತ್ರಪ್ಪ ಜಾಡರ (48) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಬೈಕ್ ಸವಾರ ಮಕ್ಬೂಲ ಅಹ್ಮದ್ ದುಖಾನದಾರ ವಿರುದ್ಧ ಚನ್ನಪ್ಪ ಬಂಕಪ್ಪ ಬಾವಿಕಟ್ಟಿ ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಅಪಘಾತ: ಓರ್ವ ಸಾವು
ಹಾವೇರಿ: ವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿ ನಂತರ ಅದನ್ನು ನಿಯಂತ್ರಿಸಲಾಗದೇ ಬಿದ್ದು, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ ಮೇಲೆ ರಾಣಿಬೆನ್ನೂರ ತಾಲೂಕ ಕವಲೆತ್ತು ಗ್ರಾಮದ ಬಳಿ ಜರುಗಿದೆ. ಮೃತ ವ್ಯಕ್ತಿಯನ್ನು ಫಳನಿ ಸೀತಣ್ಣ (28) ಎಂದು ಗುರುತಿಸಲಾಗಿದೆ. ಈ ಕುರಿತಂತೆ ಬೈಕ್ ಚಾಲಕ ವೆಂಕಟೇಶ ಮುತ್ತಣ್ಣ ವಿರುದ್ದ ತಿಪ್ಪೇಸ್ವಾಮಿ ನಿಂಗಾನಾಯ್ಕ ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
26ರಂದು ಕ್ರಿಕೆಟ್ ಪಂದ್ಯಾವಳಿ
ಹಾನಗಲ್ಲ: ಪಟ್ಟಣದಲ್ಲಿ ಶಿವಕುಮಾರ ಉದಾಸಿ ಟ್ರೋಫಿ ಅಂತಾರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಜ. 26ರಂದು ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರುವ ಈ ಪಂದ್ಯದಲ್ಲಿ ಭಾಗವಹಿಸುವವರು ಜ. 24ರೊಳಗೆ ಹೆಸರು ನೋಂದಾಯಿಸಬೇಕು. ಉತ್ತಮ ಬ್ಯಾಟ್ಸ್‌ಮನ್, ಆಲ್‌ರೌಂಡರ್, ಸಿಕ್ಸರ್, ವಿಕೆಟ್ ಕೀಪರ್, ಬೌಲರ್ ಹಾಗೂ ಕ್ಯಾಚರ್ ಟ್ರೋಫಿಗಳನ್ನು ನೀಡಲಾಗುವುದು. ಆಸಕ್ತರು ಮೊ. 9902670325 ಹಾಗೂ 81057773133 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.