ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಯುವಕರಿಗೆ ಸನ್ಮಾರ್ಗಅಗತ್ಯ: ಎನ್. ಬೀರಪ್ಪ ಯುವಕರಿಗೆ ಸನ್ಮಾರ್ಗಅಗತ್ಯ: ಎನ್. ಬೀರಪ್ಪ

Mainashree
Updated On : 23 Jan 2013, 10:54 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 22
ಇತ್ತೀಚಿನ ಯುವಜನತೆಯಲ್ಲಿ ಯಾವುದೇ ಕೊರತೆಗಳಿಲ್ಲ. ಆದರೆ, ಸಾಮೂಹಿಕ ಜವಾಬ್ದಾರಿ ತೋರುವ ಮೂಲಕ ಅವರನ್ನು ಸನ್ಮಾರ್ಗದಲ್ಲಿ ನಡೆಸುವ ಕಾರ್ಯವಾಗಬೇಕಾಗಿದೆ ಎಂದು ಪ್ರಾಚಾರ್ಯ ಎನ್. ಬೀರಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕಾಗಿನೆಲೆ ಗ್ರಾಮದ ಹುಕ್ಕಬುಕ್ಕ ಪದವಿಪೂರ್ರ್ವ ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಅಂಗವಾಗಿ ಏರ್ಪಡಿಸಿದ್ದ ದೇಶದ ಅಭಿವೃದ್ಧಿಯಲ್ಲಿ ಯುವಪೀಳಿಗೆ ಪಾತ್ರ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯುವ ಪೀಳಿಗೆ ಜಾಗೃತಿಗೊಳಿಸುವ ಕಾರ್ಯವಾಗಬೇಕಾಗಿದೆ. ಯುವಕರು ದೇಶದ ಸಂಪನ್ಮೂಲವಿದ್ದಂತೆ ಸದ್ಭಳಕೆಯಾದಲ್ಲಿ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ. ಒಂದು ವೇಳೆ ಯುವಪೀಳಿಗೆ ಜಾಗೃತವಾಗದೇ ಹೋದರೆ ಅಭಿವೃದ್ಧಿ ಕುಂಠಿತವಾಗಲಿದೆ ಎಂದರು.
ಆಧುನಿಕ ಭರಾಟೆಯಲ್ಲಿ ದುಷ್ಟ ಹವ್ಯಾಸಗಳ ದಾಸರಾಗಿರುವ ಯುವಕರು ತಮ್ಮ ಸಮಯವನ್ನು ಮೋಜು-ಮಸ್ತಿ ಹಾಗೂ ಇನ್ನಿತರ ಅನಗತ್ಯ ಕಾರ್ಯಗಳಿಗೆ ವ್ಯರ್ಥ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಹಲವು ಭಾಷೆಗಳಲ್ಲಿ ಪಾಂಡಿತ್ಯ ಪಡೆದ ವಿವೇಕಾನಂದರು ಯುವ ಜನತೆಗೆ ಪೂಜ್ಯರಾಗಿದ್ದಾರೆ. ವಿವೇಕಾನಂದರ ವೈಚಾರಿಕತೆ ಇಂದಿನ ಯುವ ಜನತೆಗೆ ಮಾರ್ಗ ದರ್ಶನವಾಗಿದೆ ಎಂದರು. ಉಪನ್ಯಾಸಕ ಸೋಮೇಶ ಭರಮಗೌಡ್ರ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ತಿಳಿಸಿದರು.
ಅತಿಥಿಗಳಾಗಿ ರವಿ ಆನವೇರಿ ಇನ್ನಿತರರು ಉಪಸ್ಥಿತರಿದ್ದರು,
ಶೃತಿ ಅಲ್ಲಾಪುರ ಸ್ವಾಗತಿಸಿದರು, ಸುನಿತಾರಾಣಿ ಹಿರೇಮಠ ನಿರೂಪಿಸಿದರು. ಸಂಜೀವ ಸಂದ್ಲೀಯವರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement