ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ರಾಜ್ಯ ಕರಡು ಯುವನೀತಿ: ಸಲಹೆ ನೀಡಿಹಾವೇರಿ: ನಮ್ಮ ರಾಜ್ಯ ಮತ್ತು ದೇಶದ ಪ್ರಗತಿಗೆ ಸಾಕಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲವೇ ನಿರಾಸಕ್ತರಿಂದ ವ್ಯವಸ್ಥೆಯೇ ಹಾಳಾಗಿದೆ ಎಂಬ ದೂಷ

Mainashree
Updated On : 23 Jan 2013, 10:54 am

ಹಾವೇರಿ: ನಮ್ಮ ರಾಜ್ಯ ಮತ್ತು ದೇಶದ ಪ್ರಗತಿಗೆ ಸಾಕಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲವೇ ನಿರಾಸಕ್ತರಿಂದ ವ್ಯವಸ್ಥೆಯೇ ಹಾಳಾಗಿದೆ ಎಂಬ ದೂಷಣೆಯಿಂದ ಇತರರೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಇಲ್ಲಿನ ಜಿ.ಎಚ್. ಕಾಲೇಜಿನಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯ ಸರ್ಕಾರ ಇತ್ತೀಚೆಗೆ ರಾಜ್ಯ ಕರಡು ಯುವನೀತಿ ಪ್ರಕಟಿಸಿದೆ. ಯುವಕರು ಸರ್ಕಾರದಿಂದ ಏನನ್ನು ಅಪೇಕ್ಷಿಸಬಹುದು ಎಂಬ ಸಲಹೆ-ಸೂಚನೆಗಳನ್ನು ತಿಳಿದುಕೊಳ್ಳಲು ಈ ಕರಡು ನೀತಿ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಪೇಕ್ಷೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಇದೇ ರೀತಿ ಕರ್ನಾಟಕ ಕ್ರೀಡಾ ನೀತಿ ಪ್ರಕಟಗೊಂಡಿದ್ದು, ಯುವಕರು ಇವುಗಳ ಉದ್ದೇಶಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎಂಬ ತಾತ್ಕಾಲಿಕ ಗುರಿ ಹೊಂದಿರುತ್ತಾರೆ. ಆದರೆ ನಿರ್ದಿಷ್ಟ ಗುರಿ ಹೊಂದುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗುರಿಗಳ ಪ್ರತಿಷ್ಠಾಪನೆಗಾಗಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇಂದಿಗೂ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನ್ಮ ತಾಳಿದ ಪ್ರತಿಯೊಬ್ಬ ಮಾನವನೂ ನಿರ್ದಿಷ್ಟ ಗುರಿ ಹೊಂದುವುದು ವಿವೇಕಾನಂದರಿಗೆ ನೀಡುವ ಗೌರವ ಎಂದರು.
ವರ್ಷಾ ಪಾಟೀಲ್, ಶ್ರೀದೇವಿ ಮಹಾಂತೇಶ ಪ್ರಾರ್ಥಿಸಿದರು. ಪ್ರೊ. ಎನ್. ಕೆಂಚವೀರಪ್ಪ ಸ್ವಾಗತಿಸಿ, ನಿರ್ವಹಿಸಿದರು. ಡಾ. ಬಿ.ಸಿ. ಬನ್ನೂರ ಅಧ್ಯಕ್ಷತೆ ವಹಿಸಿದ್ದರು. ಸಬರಿನ್ ತಾಜ್ ಢಲಾಯತ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement