ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿವೇಕಾನಂದರು ವಿಶ್ವಗುರು: ಶಾಂತಲಿಂಗ ಶ್ರೀ

Mainashree
Updated On : 23 Jan 2013, 10:53 am

ಹಾವೇರಿ: ಸ್ವಾಮಿ ವಿವೇಕಾನಂದರು ವಿಶ್ವಗುರು. ಅವರ ಪ್ರತಿ ಸಂದೇಶವೂ ರೋಮಾಂಚಕ. ಆದ್ದರಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವಕರ ಜಯಂತಿ ಎಂದು ಗೌರವಿಸುತ್ತಿರುವುದು ಸ್ವಾಗತಾರ್ಹ ಎಂದು ಹೊಸಮಠದ ಶಾಂತಲಿಂಗ ಶ್ರೀಗಳು ನುಡಿದರು.
ಇಲ್ಲಿನ ಎಸ್‌ಜೆಎಂ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಅತಿಥಿಗಳಾಗಿದ್ದ ಹನುಮಂತಗೌಡ ಗೊಲ್ಲರ, ವಿವೇಕಾನಂದರು ಬದುಕಿದ್ದು ಕೇವಲ 36 ವರ್ಷ. ಆದರೆ ವಿಶ್ವ ಗುರು ಎಂದು ಕರೆಸಿಕೊಳ್ಳುವ ಹಿಂದಿನ ಶ್ರಮ ಅಮೂಲ್ಯ. ಗುರು-ಶಿಷ್ಯರ ಸಂಬಂಧ ದೈವಿಕವಾದುದು. ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಸ್ಮರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಬೇವಿನಮರದ ಮಾತನಾಡಿ, ವಿವೇಕಾನಂದರ ಜಯಂತಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳು ಓದು ಬರಹ ಮಾತ್ರವಲ್ಲದೆ, ದೇಶ ಹಾಗೂ ಸಮಾಜದ ಬಗೆಗೂ ಕಾಳಜಿ ವಹಿಸುವಂತೆ ಸಲಹೆ ಮಾಡಿದರು.
ನಗರ ಘಟಕದ ಅಧ್ಯಕ್ಷ ಪ್ರಕಾಶ ಬಿಷ್ಟೆಂಡೆರ ಮಾತನಾಡಿದರು. ಆರತಿ ಹೊಟ್ಟಿಗಿ ನಿರ್ವಹಿಸಿದರು. ಜೆ.ಎಂ. ಮಾದರ ಸ್ವಾಗತಿಸಿದರು. ಕವಿತಾ ಗೌಡ ನಾಯಕ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement