ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದಿನಿಂದ ಜಾತ್ರೋತ್ಸವ (ಸುದ್ದಿ ಸಂಕ್ಷೇಪ)

Mainashree
Updated On : 25 Jan 2013, 10:52 am

ಸವಣೂರು: ತಾಲೂಕಿನ ಅತ್ಯಂತ ಜಾಗ್ರತ ಸ್ಥಳವಾಗಿರುವ ಕಳಸೂರು ಮಹಾಲಕ್ಷ್ಮಿ(ಮಾಯಮ್ಮ) ದೇವಿ ಜಾತ್ರೋತ್ಸವ ಜ. 25ರಿಂದ 27ರ ವರೆಗೆ ಜರುಗಲಿದ್ದು, ಅದರಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂದನನಾಮ ಸಂವತ್ಸರದ ಶುದ್ಧ ತ್ರಯೋದಶಿ ದಿನವಾದ ಜ. 25ರಂದು ಬೆಳಗ್ಗೆ ದೇವಿಗೆ ಅಭಿಷೇಕ ಹಾಗೂ ಎಲೆಪೂಜೆ ಜರುಗಲಿದೆ.
ವಿವಿಧ ಉತ್ಸವ: ಬಳಿಕ ಪಲ್ಲಕ್ಕಿ ಉತ್ಸವ, ಡೊಳ್ಳು, ಭಜನೆ ಸೇರಿದಂತೆ ವಿವಿಧ ವಾದ್ಯ-ವೈಭವಗಳೊಂದಿಗೆ ನೆರವೇರಲಿದೆ. ದೇವಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 26ರಂದು ಬಂಡಿ ಉತ್ಸವವನ್ನು ಎತ್ತಿನ ಮಜಲುಗಳೊಂದಿಗೆ ಕೈಗೊಳ್ಳಲಾಗುತ್ತದೆ. 27ರಂದು ಭಾನುವಾರ ಓಕುಳಿ ಗುಂಡಿಗೆ ನೀರು ಹಾಕುವದು, ಸಂಜೆ ಪಲ್ಲಕ್ಕಿ ಸೇವೆಯೊಂದಿಗೆ ಓಕುಳಿ, ಆನೆ ಬಂಡಿ ಉತ್ಸವ ನೆರವೇರಲಿದೆ. ಜಾತ್ರಾ ಮಹೋತ್ಸವದಲ್ಲಿ ಸದ್ಭಕ್ತರು ಪಾಲ್ಗೊಳ್ಳುವಂತೆ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.
ಬೈಕ್ ರ್ಯಾಲಿ: ಕಳಸೂರು ಗ್ರಾಮದ ಜಾತ್ರಾ ಮಹೋತ್ಸವ ಹಾಗೂ ರಾಜ್ಯೋತ್ಸವದ ಅಂಗವಾಗಿ ಜ. 26ರಂದು ಸ್ಲೋ ಬೈಕ್ ರ್ಯಾಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕಳಸೂರು ಗ್ರಾಮ ಹಿತರಕ್ಷಣಾ ನಾಗರಿಕ ವೇದಿಕೆ ಹಾಗೂ ಸಮಸ್ತ ಗ್ರಾಮಸ್ಥರ ಸಹಯೋಗದೊಂದಿಗೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಆಕರ್ಷಕ ಪುರಸ್ಕಾರ ಪ್ರಕಟಿಸಲಾಗಿದೆ. ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾರ್ಯಕ್ರಮ ನೆರವೇರಲಿದೆ. ಜ. 26ರಂದು ಸಂಜೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪುರಸ್ಕೃತರಾದ ವಿದ್ಯಾರ್ಥಿಗಳಿಂದ ಗೀತ ಗಾಯನ, ನೃತ್ಯ ಕಾರ್ಯಕ್ರಮವಿದೆ. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಅಪಘಾತ: ಸವಾರ ಸಾವು
ರಾಣಿಬೆನ್ನೂರು: ಕಾರು-ಬೈಕ್ ಮುಖಾಮುಖಿ ಡಿಕ್ಕಿ ಪರಿಣಾಮ ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಮದೋಡ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಕಮದೋಡ ಗ್ರಾಮದ ನಿವಾಸಿ ಕೆಇಬಿ ನಿವೃತ್ತ ನೌಕರ, ನೌಕರರ ಸಂಘದ ಮಾಜಿ ಅಧ್ಯಕ್ಷ ಹನುಮಂತಪ್ಪ ರಾಮಪ್ಪ ಲಮಾಣಿ (65) ಎಂದು ಗುರುತಿಸಲಾಗಿದೆ. ಮೃತರು ಪತ್ನಿ, 5 ಗಂಡು, 1 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಹಲಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement