ನಗರಕ್ಕೆ ಸಮರ್ಪಕ ಕುಡಿವ ನೀರು ಪೂರೈಸಿ
ಶಿಗ್ಗಾಂವಿ: ಶಿಗ್ಗಾಂವಿ ನಗರಕ್ಕೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಿರಿ ಇಲ್ಲವೇ ನೀರಿನ ಕರವನ್ನು ಸಂಪೂರ್ಣ ಮನ್ನಾ ಮಾಡಿ ಎಂದು ಪುರಸಭೆಗೆ ಮುತ್ತಿಗೆ ಹಾಕಿ ಕಾಲಿ ಕೊಡ ಇಟ್ಟು ರಾಜ್ಯ ಕಾರ್ಮಿಕರ ಹಿತರಕ್ಷಣಾ ಮತ್ತು ಜಾಗೃತಿ ಸಂಘ ಪ್ರತಿಭಟನೆ ನಡೆಸಿ, ಪುರಸಭೆ ಮುಖ್ಯಾಧಿಕಾರಿ ಎಸ್.ಎಚ್. ನಾಯ್ಕರ್ ಅವರಿಗೆ ಮನವಿ ಸಲ್ಲಿಸಿದರು.
ನಗರ ನಿವಾಸಿಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ಪರಿಹಾರಕ್ಕೆ ಮುಂದಾಗದೆ ಇರುವುದು ಪುರಸಭೆ ವೈಫಲ್ಯವನ್ನು ಎತ್ತಿ ತೊರುತ್ತಿದೆ. ತಿಂಗಳಿಗೆ ಎರಡು ಬಾರಿಯಾದರು ನೀರು ಪೂರೈಕೆಯಾಗುತ್ತಿಲ್ಲ. ನಗರಕ್ಕೆ ಎರಡು ಬಾರಿಯಾದರು ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ನಗರದ ಜನತೆಗೆ ಕಳೆದೊಂದು ವರ್ಷದಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಪುರಸಭೆ ಮಾತ್ರ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಅದಕ್ಕಾಗಿ ಪುರಸಭೆಯವರು ಕರ ಮನ್ನಾ ಮಾಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ರಾಜ್ಯ ಕಾರ್ಮಿಕರ ಹಿತರಕ್ಷಣಾ ಮತ್ತು ಜಾಗೃತಿ ಸಂಘದ ಅಧ್ಯಕ್ಷ ಫಕ್ಕಿರೇಶ ಶಿಗ್ಗಾಂವಿ, ವಿ.ವಿ. ತುಪ್ಪದ, ಶಂಕರ ಜಿ. ಬಂಡಿವಡ್ಡರ, ದುರಗಪ್ಪ ಬಂಡಿವಡ್ಡರ, ನಿಂಗಪ್ಪ ಬಂಡಿವಡ್ಡರ, ಶಿವಪ್ಪ ಭಜಂತ್ರಿ, ಫಕ್ಕಿರೇಶ ಗುಳೇದ, ತಿಪ್ಪಣ್ಣ ಕೊರವರ, ಹನುಮಂತ ಕುಂದರಗಿ, ನಿಂಗವ್ವ ಗುಳೇದ, ಹುಲಿಗೆವ್ವ ಕೊರವರ, ಮಲ್ಲವ್ವ ಗುಳೇದ, ಶಿದ್ದವ್ವ ಗುಳೇದ, ಶಾಂತವ್ವ ಗುಳೇದ, ಮಾರುತಿ ಭಜಂತ್ರಿ, ರೇಣುಕಾ ವಡ್ಡರ, ಮಹದೇವಪ್ಪ ವಡ್ಡರ, ಲಲಿತವ್ವ ಬಡಿಗೇರ, ನಾಗರತ್ನಾ ವಡ್ಡರ, ಇತರರು ಪ್ರತಿಭಟನೆಯಲ್ಲಿದ್ದರು.