ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹೊಸಳ್ಳಿ: 28ರಂದು ಅನ್ನಸಂತರ್ಪಣೆ (ಸುದ್ದಿ ಸಂಕ್ಷೇಪ)

Mainashree
Updated On : 25 Jan 2013, 10:50 am

ಹಿರೇಕೆರೂರು: ತಾಲೂಕಿನ ಸುಕ್ಷೇತ್ರ ಹೊಸಳ್ಳಿ ಗ್ರಾಮ ಸಮೀಪದ ಶ್ರೀ ದಿಗ್ಗಿ ಮಲ್ಲಿಕಾರ್ಜುನ ದೇವರ ಅನ್ನಸಂತರ್ಪಣೆ ಜ. 28ರಂದು ಜರುಗಲಿದೆ. ಅಂದು ಮುಂಜಾನೆ 6ಕ್ಕೆ ದಿಗ್ಗಿ ಮಲ್ಲಿಕಾರ್ಜುನ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಂಗಳಾರತಿ ನಡೆಯುವುದು. 10 ಘಂಟೆಗೆ ಹರ-ಗುರು-ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಭಜನೆ. ಸಕಲ ಮಂಗಲ ವಾದ್ಯಗಳೊಂದಿಗೆ ಉತ್ಸವ ಮೂರ್ತಿ ವೈಭವದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸುವುದು. ಅನಂತರ ಗಣಾಧೀಶರ ಪೂಜೆ, ಮಹಾಮಂಗಳಾರತಿ. ಆಮೇಲೆ ಅನ್ನ ಸಂತರ್ಪಣೆ. ಭಕ್ತರು ಪ್ರಸಾದ ಸ್ವಿಕರಿಸಿ ದಿಗ್ಗಿ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಕಾರ್ಯದರ್ಶಿ ಎನ್.ಎಚ್. ಹೊಳಿಯಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

31ರಂದು ವಾಲಿಬಾಲ್
ಹಿರೇಕೆರೂರು: ಮಲ್ಲಿಕಾರ್ಜುನ ನ್ಯೂ ಯುಥ್ ಕ್ಲಬ್, ಹೊಸಳ್ಳಿ ವತಿಯಿಂದ ಜ. 31ರಂದು ಬೆಳಗ್ಗೆ 9ಕ್ಕೆ ಗ್ರಾಮದ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತರು ಜ. 29ರೊಳಗಾಗಿ ಹೆಸರು ನೋಂದಾಯಿಸಬೇಕು. ಮಾಹಿತಿಗೆ, ಮೊ. 9742646085, 9972498780 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಜಿಲ್ಲಾ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ
ಹಿರೇಕೆರೂರು: ಶೈಕ್ಷಣಿಕ ಪ್ರವಾಸಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಐತಿಹಾಸಿಕ ಸ್ಥಳಗಳನ್ನು ವೀಕ್ಷಿಸುವುದರಿಂದ ನಮ್ಮ ದೇಶದ ಭವ್ಯ ಪರಂಪರೆಯ ಜ್ಞಾನ ಮಕ್ಕಳಿಗೆ ಸಿಗುತ್ತದೆ ಎಂದು ಸಮನ್ವಯಾಧಿಕಾರಿ ಎಂ.ಬಿ. ಅಂಬಿಗೇರ ನುಡಿದರು. ರಾಜ್ಯ ಸರ್ಕಾರ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಿಲ್ಲಾ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರಿ ಉರ್ದು ಪ್ರೌಢಶಾಲೆಯ 111 ಮಕ್ಕಳು 2 ಸರ್ಕಾರಿ ಬಸ್ಸುಗಳಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದರು. ಹಾವೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ದೈಹಿಕ ಅಧೀಕ್ಷಕ ನಾಗರಾಜ ಇಚ್ಚಂಗಿ, ಶಿಕ್ಷಣ ಸಂಯೋಜಕ ಸಿ.ಎಸ್. ಸನದಿ, ವಕ್ಫ್ ಬೋರ್ಡ್ ಅಧ್ಯಕ್ಷ ಅಲ್ಲಾಭಕ್ಷ ತಿಮ್ಮಾಪುರ, ನಜೀರ ಸಾಬ ನದಾಫ, ಇಸ್ಮಾಯಿಲ ನದಾಫ, ಮುಖ್ಯ ಶಿಕ್ಷಕಿ ಎಚ್.ಎಸ್. ಬಳ್ಳಾರಿ, ಎ.ಸಿ. ಸಂಗೊಳ್ಳಿ, ಎಸ್.ಎಂ. ವರ್ದಿ, ಐ.ಎನ್. ಸೌದಾಗರ್, ಎಚ್.ಕೆ. ಹುಬ್ಬಳ್ಳಿ ಉಪಸ್ಥಿತರಿದ್ದರು.

ಫೆ. 4ರಿಂದ ಕಮದೋಡ ಗ್ರಾಮದೇವಿ ಜಾತ್ರೆ
ರಾಣಿಬೆನ್ನೂರು: ತಾಲೂಕಿನ ಕಮದೋಡ ಗ್ರಾಮ ದೇವತೆಯಾದ ಲೆಕ್ಕಿಕಟ್ಟಿ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಫೆ. 4ರಿಂದ 9ರ ವರೆಗೆ ನಡೆಯಲಿದೆ. ಫೆ. 4ರಂದು ಗ್ರಾಮದ ಬಣಕಾರ ಮನೆಯಿಂದ ಪೂಜೆಗೊಂಡು, ವಾದ್ಯಮೇಳದ ಜತೆಗೆ ಹೊರಡುವ ದೇವಿಯ ಉತ್ಸವ, ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಹಾದು ಬೆಳಗಿನ ಜಾವ 6ಕ್ಕೆ ತುಂಗಭದ್ರಾ ನೂಲಿನ ಗಿರಣಿಯ ಹಿಂಭಾಗದ ದೇವಸ್ಥಾನ ತಲುಪುವುದು. ಫೆ. 5ರಂದು ದೇವಿಗೆ ಅಭಿಷೇಕ, ಉಡಿ ತುಂಬುವುದು, ಹರಕೆ, ಬೆಲ್ಲದ ಬಂಡಿ, ಎತ್ತಿನ, ಹೂವಿನಹಾರದ ಮೆರವಣಿಗೆ, ಅನ್ನ ಸಂತರ್ಪಣೆ ನಡೆಯುತ್ತದೆ. 7, 8ರಂದು ಧಾರ್ಮಿಕ ಕಾರ್ಯಕ್ರಮಗಳಿವೆ. ಫೆ. 9ರಂದು ಸಂಜೆ 5ಕ್ಕೆ ದೇವಿಯು ಮರಳಿ ಗ್ರಾಮವನ್ನು ಪ್ರವೇಶಿಸುವಳೆಂದು ಜಾತ್ರೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.

ನೌಕರರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
ಸವಣೂರು: ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆ.ಎಸ್. ಗಾಣಿಗೇರ, ಕಾರ್ಯದರ್ಶಿಯಾಗಿ ಎಸ್.ಡಿ. ದೇವಗಪ್ಪನವರ ಅವಿರೋಧ ಆಯ್ಕೆಗೊಂಡಿದ್ದಾರೆ. ಪಟ್ಟಣದ ಬಿಇಎಸ್ ಬಾಲಿಕಾ ಪ್ರೌಢಶಾಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಸಮ್ಮುಖದಲ್ಲಿ ಜರುಗಿದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ಮಾಸಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಿ.ಎಸ್. ರೋಣದ, ವ್ಹಿ.ಎಸ್. ಪವಾರ ಉಪಾಧ್ಯಕ್ಷರಾಗಿ, ಬಿ.ಬಿ. ಪೋಲೇಶಿ ಅವರನ್ನು ಆಯ್ಕೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement