ಅಕ್ಕಿಯವರಿಗೆ ಟಿಪ್ಪು ಸುಲ್ತಾನ್ ಪ್ರಶಸ್ತಿ
ರಾಣಿಬೆನ್ನೂರು: ಇಲ್ಲಿನ ನೀಡ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಎಚ್.ಎಫ್. ಅಕ್ಕಿಯವರಿಗೆ 2012-13ನೇ ಸಾಲಿನ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರಾಜ್ಯ ಪ್ರಶಸ್ತಿ ಲಭಿಸಿದೆ. ಪರಿಸರ ಶಿಕ್ಷಣ, ಸಾವಯವ ಕೃಷಿ ಅಭಿವೃದ್ಧಿಗಾಗಿ ನೀಡ್ಸ್ ಸಂಸ್ಥೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಗೆ ಹಾಗೂ ಕೂಲಿಕಾರ್ಮಿಕರಿಗೆ ಹಾಗೂ ನಿರುದ್ಯೋಗಿ ಯುವ ಜನತೆಗೆ ವಿವಿಧ ರೀತಿಯಿಂದ ತರಬೇತಿಗಳನ್ನು ಏರ್ಪಡಿಸುವುದರೊಂದಿಗೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ನೀಡ್ಸ್ ಸಂಸ್ಥೆಯಿಂದ ಏರ್ಪಡಿಸಿದ್ದ ಹಲವಾರು ಕಾರ್ಯಕ್ರಮಗಳನ್ನು ವೀಕ್ಷಿಸಿರುವ ಬೆಂಗಳೂರಿನ ದಿಶಾ ಚಾರಿಟೆಬಲ್ ಟ್ರಸ್ಟ್‌ನವರು ಎಚ್.ಎಫ್. ಅಕ್ಕಿಯವರ ಸೇವೆ ಗುರುತಿಸಿ 2012-13ನೇ ಸಾಲಿನ ಮೈಸೂರು ಹುಲಿ ಟಿಪ್ಪು ಸುಲ್ತಾನ್ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿ ಬೆಂಗಳೂರಿನಲ್ಲಿರುವ ಟ್ರಸ್ಟ್ ಕಚೇರಿ ಅಧ್ಯಕ್ಷರಾದ ಇರ್ಷಾದ್ ಅಹಮದ್ ಶೇಖ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದಿರುವ ಅಕ್ಕಿಯವರು ಸವಣೂರು ತಾಲೂಕಿನ ಕುಣಿ ಮಳ್ಳಿಹಳ್ಳಿ ಗ್ರಾಮದವರಾಗಿದ್ದಾರೆ.