ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಇಂದು ಅಂತರ್‌ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯ (ಸುದ್ದಿ ಸಂಕ್ಷೇಪ)

Mainashree
Updated On : 26 Jan 2013, 11:02 am

ಹಾನಗಲ್: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕ್ಲಬ್‌ನಿಂದ ಹಾನಗಲ್ ತಾಲೂಕು ಕ್ರೀಡಾಂಗಣದಲ್ಲಿ ಜ. 26ರಂದು ಅಂತರ್ ರಾಜ್ಯಮಟ್ಟದ ಶಿವಕುಮಾರ ಉದಾಸಿ ಟ್ರೋಫಿ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡು ವಿಜೇತವಾಗುವ ತಂಡಕ್ಕೆ ಪ್ರಥಮ ಬಹುಮಾನ ರು. 50 ಸಾವಿರ, ದ್ವಿತೀಯ ಬಹುಮಾನ ರು. 25 ಸಾವಿರ ಬಹುಮಾನ ಕೊಡಲಾಗುತ್ತದೆ. ಅಲ್ಲದೇ ವಯಕ್ತಿಕವಾಗಿ ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಆಲ್‌ರೌಂಡರ್, ಬೆಸ್ಟ್ ಸಿಕ್ಸರ್, ಬೆಸ್ಟ್ ವಿಕೇಟ್ ಕೀಪರ್, ಬೆಸ್ಟ್ ಬೌಲರ್, ಬೆಸ್ಟ್ ಕ್ಯಾಚರ್‌ಗೆ ಬಹುಮಾನ ನೀಡಲಾಗುತ್ತದೆ ಎಂದು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಅಸೋಸಿಯೇಶನ್‌ನ ಗೌರವ ಅಧ್ಯಕ್ಷ ರಾಜು ಎಸ್. ಪೇಟಕರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿವಾಜಿ ಸ್ಪೋರ್ಟ್ಸ್ ಕ್ಲಬ್ ಅಸೋಸಿಯೇಶನ್ ಅಧ್ಯಕ್ಷ ಸಂತೋಷ್ ಸಿ. ಟಿಕೋಜಿ-9902670325, ರಾಜು ಎಚ್. ಗೌಳಿ-8105773133ಗೆ ಸಂಪರ್ಕಿಸಲು ಕೋರಲಾಗಿದೆ.

ಕಳ್ಳರ ಸೆರೆ: 10 ಬೈಕ್ ವಶ
ಹಾವೇರಿ: ಇಬ್ಬರು ಬೈಕ್ ಕಳ್ಳರನ್ನು ಸೆರೆ ಹಿಡಿಯುವ ಮೂಲಕ ಹಾವೇರಿ ಜಿಲ್ಲಾದ್ಯಂತ ನಡೆಯುತ್ತಿದ್ದ ಕಳ್ಳರ ಹಾವಳಿಗೆ ಹಾವೇರಿ ಶಹರ ಠಾಣೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ಹಾವೇರಿ ನಗರದ ಬಸ್ತಿ ಓಣಿಯ, ಹಾಲಿ ರಾಣಿಬೆನ್ನೂರಲ್ಲಿ ವಾಸವಾಗಿರುವ ರಾಜೇಸಾಬ ಮಹ್ಮದಜಾಫರಸಾಬ ಹೊಸಮನಿ ಹಾಗೂ  ಶಿಗ್ಗಾಂವಿ ತಾಲೂಕಿನ ತೆವರಮೆಳ್ಳಿಹಳ್ಳಿಯ ರಿಯಾಜ ಅಹ್ಮದ್ ಮಹ್ಮದಲಿ ನದಾಫ ಎಂಬುವರನ್ನು ಬಂಧಿಸಿರುವ ಪೊಲೀಸರು, ಅವರಿಂದ ರು. 3 ಲಕ್ಷ ಮೌಲ್ಯದ 10 ಬೈಕ್ ವಶಪಡಿಸಿಕೊಂಡಿದ್ದಾರೆ. ವಿವಿಧೆಡೆ ಬೈಕ್ ಕದಿಯುತ್ತಿದ್ದ ಇವರು ಆರ್‌ಸಿ ಬುಕ್ ಕಳೆದಿದೆ ಎಂದು ಸುಳ್ಳು ಹೇಳಿ ಅಫಿಡವಿಟ್ ಮಾಡಿ, ಬೈಕ್ ಮಾರುತ್ತಿದ್ದರು. ಶಹರ ಠಾಣೆ ಸಿಪಿಐ ಎಂ.ಜಿ. ಪಂಪಾಪತಿ ನೇತೃತ್ವದಲ್ಲಿ ಪಿಎಸ್‌ಐ ಡಿ.ಬಿ. ಪಾಟೀಲ, ಗಣಪತಿ, ಸಿಬ್ಬಂದಿ ಓಲೇಕಾರ, ಎಲ್.ಎನ್. ಅಣ್ಣಿಗೇರಿ, ಸುರೇಶ ನಾಯ್ಕ, ಎಂ.ಆರ್. ಗುಂಜಾಳ, ಎಸ್.ಡಿ. ಸಾಗರ, ಸಿ.ಎಂ. ಕಿಳ್ಳಿ ಮತ್ತಿತರರಿದ್ದ ತಂಡ ಕಳ್ಳರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ತಂಡಕ್ಕೆ ಎಸ್ಪಿ ಚೇತನಸಿಂಗ್ ರಾಥೋರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ. ಅಗಡಿ, ಡಿವೈಎಸ್ಪಿ ಸಿ.ಸಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದು, ಬಹುಮಾನ ಘೋಷಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ: ಕಂಬಳಿ
ರಾಣಿಬೆನ್ನೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಣಿಬೆನ್ನೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅವಕಾಶ ನೀಡುವಂತೆ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗಿ ಹುಣಶಿಕಟ್ಟಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಂಜುನಾಥ ಕಂಬಳಿ ತಿಳಿಸಿದ್ದಾರೆ. ಬಿಇ ಪದವೀಧರರಾಗಿರುವ ತಾವು 20 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರಾಗಿ ಸಮಾಜ ಸೇವೆ ಸಲ್ಲಿಸುತ್ತಿರುವುದಾಗಿ ತಿಳಿಸಿದ ಅವರು, ಕಳೆದ ಚುನಾವಣೆಯಲ್ಲಿ ಸ್ವಲ್ಪದರಲ್ಲೇ ಅವಕಾಶ ಕೈತಪ್ಪಿತು. ಈ ಬಾರಿ ಅವಕಾಶ ನೀಡುವುದಾಗಿ ರಾಜ್ಯ ಮುಖಂಡರು ಆಶ್ವಾಸನೆ ನೀಡಿದ ಹಿನ್ನೆಲೆಯಲ್ಲಿ ಜ. 23ರಂದು ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗಿ ಕಂಬಳಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement