ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಗಂಗಾಮತಸ್ಥರು ಅಭಿವೃದ್ಧಿ ಹೊಂದಿ

Mainashree
Updated On : 26 Jan 2013, 11:01 am

ಸವಣೂರು: ತಾಲೂಕಿನ ಕಳಸೂರು ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆಯನ್ನು ವಿಜೃಂಬಣೆಯೊಂದಿಗೆ ಕೈಗೊಳ್ಳಲಾಯಿತು. ಪೂರ್ಣ ಕುಂಭ, ಕಲಶ ಹಾಗೂ ವಿವಿಧ ವಾಧ್ಯ-ವೈಭವಗಳೊಂದಿಗೆ ಮೆರವಣಿಗೆ ನೆರವೇರಿತು. ಬಳಿಕ ಗ್ರಾಮದ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜಯಂತ್ಯುತ್ಸವ ಆಚರಣೆಯ ಮೆರವಣಿಗೆ ನಡೆಯಿತು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಳಸೂರು ಗ್ರಾಮದ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ್ ಮಾತನಾಡಿ, ಗಂಗಾಮತಸ್ಥ ಸಮಾಜ ಸಂಘಟನೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ತೋರಬೇಕಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕಾಗಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯನವರ ಜೀವನ, ಸಾಧನೆಗಳನ್ನು ಸ್ಮರಿಸಿಕೊಂಡ ಗ್ರಾಮದ ಪ್ರಮುಖರಾದ ರಾಜು ಬಂಕಾಪುರ ಹಾಗೂ ಇನ್ನಿತರ ಸಮಾಜ ಬಾಂಧವರು, ಹಿಂದುಳಿದಿರುವ ಗಂಗಾಮತಸ್ಥ ಸಮಾಜ ಪ್ರಜ್ಞಾವಂತಿಕೆ ಮೂಡಿಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಉನ್ನತಿ ಸಾಧಿಸಬೇಕು. ಸಮಾಜದ ಸಂಘಟನೆ ತೀವ್ರಗೊಳ್ಳಬೇಕು ಎಂದರು.
ಸಮಾಜದ ಪ್ರಮುಖರಾದ ಮಾಲತೇಶ ತೊಂಡೂರ, ಯಲ್ಲಪ್ಪ ಕೋಗಿಲೆ, ಕೃಷ್ಣಮೂರ್ತಿ ಶಿಂಗಣ್ಣನವರ್, ಶಂಕರ ಮಂಟಗಣಿ, ದಿನೇಶ ಶಿಂಗಣ್ಣನವರ್, ಪರಮೇಶ್ವರಪ್ಪ ಕಾಳಪ್ಪನವರ್ ರಜಯಾ ಝಾಗಟಿ, ರಾಜು ಬಂಕಾಪುರ, ನಿಂಗಪ್ಪ ಶಿಂಗಣ್ಣನವರ್, ಬಸವರಾಜ ನಾಗಮ್ಮನವರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement