ನಾಳೆ ಅಸಂಘಟಿತ ಕಾರ್ಮಿಕರ ಸಮಾವೇಶ
ರಾಣಿಬೆನ್ನೂರು: ಜೈ ಭಾರತ ಶ್ರಮಜೀವಿ ರೇಲ್ವೆ ಗೂಡ್ಸ್‌ಶೆಡ್ ಗುತ್ತಿಗೆ ಹಮಾಲರ ಸಂಘದ ನೇತೃತ್ವದಲ್ಲಿ ಜ. 27ರಂದು ಬೆಳಗ್ಗೆ 11 ಗಂಟೆಗೆ ಗಂಗಾಪುರ ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಮಠದಲ್ಲಿ ತಾಲೂಕು ಅಸಂಘಟಿತ ಕಾರ್ಮಿಕರ ಸಮಾವೇಶ ಏರ್ಪಡಿಸಿದೆ.
ಗುಡ್ಡದ ಅನ್ವೇರಿ ವಿರಕ್ತ ಮಠದ ಶಿವಯೋಗಿಶ್ವರ ಸ್ವಾಮಿಗಳು, ದೊಡ್ಡಪೇಟೆ ವಿರಕ್ತ ಮಠದ ಗುರುಬಸವ ಸ್ವಾಮಿಗಳು, ರಾಮಕೃಷ್ಣ ವಿವೇಕಾನಂದಾಶ್ರಮದ ಪ್ರಕಾಶಾನಂದಜಿ ಮಹಾರಾಜ ಹಾಗೂ ಹಿರೇಮಠದ ಶಿವಯೋಗಿ ದೇವರು ಸಾನ್ನಿಧ್ಯ ವಹಿಸುವರು.
ರೇಲ್ವೆ ನಿಲ್ದಾಣದ ಬಳಿ ಸಂಘದ ನಾಮಫಲಕಲವನ್ನು ಕಾಟನ್ ಮಾರ್ಕೆಟ್ ವರ್ತಕ ಬಿ.ಎಸ್. ಸಣ್ಣಗೌಡ್ರ ಅನಾವರಣ ಮಾಡುವರು. ಕೊಟ್ಟೂರೇಶ್ವರ ಮಠದಲ್ಲಿ ಸಮಾವೇಶವನ್ನು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಳದ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ ಕೆ.ಎಸ್. ಶರ್ಮಾ ಉದ್ಘಾಟಿಸುವರು. ವರ್ತಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅರಳಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ. ಶಿವಣ್ಣ, ಮಾಜಿ ಸಚಿವ ಕೆ.ಬಿ. ಕೋಳಿವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಪ್ರಕಾಶಂ, ನಗರಸಭೆ ಮಾಜಿ ಅಧ್ಯಕ್ಷ ಬಸವರಾಜ ಎನ್. ಪಾಟೀಲ, ನಗರಸಭೆ ಅಧ್ಯಕ್ಷ ಡಾ ಗಣೇಶ ದೇವಗಿರಿಮಠ, ಬಿಬಿಎಂಪಿ ಮಾಜಿ ಉಪ ಮೇಯರ್ ಆರ್. ಶಂಕರ್, ಹುಬ್ಬಳ್ಳಿ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಎಂ.ಎಸ್. ತಿಮ್ಮೋಲಿ, ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಜಿಲ್ಲಾ ಮಹಾ ಮಂಡಳದ ಅಧ್ಯಕ್ಷ ಶಿವಣ್ಣ ಹಟ್ಟಿಯವರ, ಜಿಲ್ಲಾ ಕಾರ್ಮಿಕ ಅಧಿಕಾರಿ ಸಿ.ವಿ. ಹೊರಟ್ಟಿ ಹಾಗೂ ವರ್ತಕ ಶಿವಯ್ಯ ಶಂಕ್ರಿಮಠ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.