ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನಾಳೆ ಸ್ತ್ರೀಸೌಖ್ಯಂ ಪುಸ್ತಕ ಬಿಡುಗಡೆ, ಸಂವಾದ ಕಾರ್ಯಕ್ರಮ

Mainashree
Updated On : 26 Jan 2013, 11:00 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 25
ನಗರದ ಸಾಹಿತಿ ಮತ್ತು ಕಲಾವಿದರ ಬಳಗದ ಆಶ್ರಯದಲ್ಲಿ ಉದಯೋನ್ಮುಖ ಲೇಖಕಿ ಡಾ೤ ಅಶ್ವಿನಿ ಶಿವಶಂಕರ ಅವರು ಮಹಿಳಾ ಆರೋಗ್ಯ ಕುರಿತು ಬರೆದ 'ಸ್ತ್ರೀ ಸೌಖ್ಯಂ' ಕೃತಿ ಜ. 27ರಂದು ಸಂಜೆ 5.30ಕ್ಕೆ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಬಿಡುಗಡೆ ಮತ್ತು ಸಂವಾದ ನಡೆಯಲಿದೆ. ಕೃತಿಯನ್ನು ವೈದ್ಯ ಡಾ೤ ವಿ.ಕೆ. ಭಗವತಿ ಬಿಡುಗಡೆ ಮಾಡುವರು. ಡಾ೤ ಶೈಲಜಾ ಗೊಡ್ಡೆಮ್ಮಿ ಪುಸ್ತಕ ಪರಿಚಯಿಸುವರು. ಅಧ್ಯಕ್ಷತೆಯನ್ನು ಹಾವೇರಿ ತಾಲೂಕು ಕಸಾಪ ಅಧ್ಯಕ್ಷ ಪ್ರೊ೤ ವೈ.ಬಿ. ಆಲದಕಟ್ಟಿ ವಹಿಸುವರು. ಅತಿಥಿಗಳಾಗಿ ಮುಂಡಗೋಡ ತಾಲೂಕು ಕಸಾಪ ಅಧ್ಯಕ್ಷ ಡಾ೤ ಪಿ.ಪಿ. ಛಬ್ಬಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಬಿ. ಕಾಳೆ ಹಾಗೂ ಡೈಟ್ ಉಪನ್ಯಾಸಕ ಆರ್.ಬಿ. ಚಿನ್ನಿಕಟ್ಟಿ ಆಗಮಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement