ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿದ್ಯಾರ್ಥಿಗಳಿಗೆ ವೇಷಭೂಷಣ ಸ್ಪರ್ಧೆ

Mainashree
Updated On : 26 Jan 2013, 11:01 am

ಹಾನಗಲ್ಲ: ಪ್ರೀತಿ-ತಾಳ್ಮೆ, ಕ್ಷಮೆ, ಕರ್ತವ್ಯಶೀಲತೆ, ನಿಸ್ವಾರ್ಥ ಗುಣ ಇಡೀ ಸಮಾಜವನ್ನೇ ಸದೃಢ ಮಾಡಬಹುದು ಎಂದು ಸಾರಿದವರು ಸ್ವಾಮಿ ವಿವೇಕಾನಂದರು. ಕಲುಷಿತಗೊಂಡ ಇಂದಿನ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ದಿವ್ಯಶಕ್ತಿ ವಿವೇಕಾನಂದರ ಸಂದೇಶದಲ್ಲಿದೆ ಎಂದು ವಿಶ್ರಾಂತ ಮುಖ್ಯಾಧ್ಯಾಪಕ ಎಂ.ಬಿ. ಪಾಟೀಲ ಹೇಳಿದರು. ಪಟ್ಟಣದ ಗೌರಮ್ಮ ಹಿರೇಮಠ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವೇಷಭೂಷಣ ಸ್ಪರ್ಧೆಯಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಸುಭಿಕ್ಷ ಜಗತ್ತಿಗಾಗಿಯೇ ತಪಸ್ಸನ್ನು ಮಾಡಿದ ಪ್ರಪಂಚದ ಏಕೈಕ ಸನ್ಯಾಸಿ ವಿವೇಕಾನಂದರು. 'ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂದು ಯುವಕರನ್ನು ಬಡಿದೆಬ್ಬಿಸಿದ ವೀರ ಸನ್ಯಾಸಿಯ ಕ್ರಿಯಾಶೀಲತೆ ನಮಗೆಲ್ಲ ಮಾದರಿ ಎಂದರು.
ನ್ಯಾಯವಾದಿ ಕಂಬಾಳಿಮಠ ಮಾತನಾಡಿ, ನೀತಿ ಶಿಕ್ಷಣದ ಪ್ರತಿಪಾದಕರಾಗಿದ್ದ ವಿವೇಕಾನಂದರ ಬದುಕು ನಮಗೆ ಆದರ್ಶ. ವಿಶಾಲ ಮನೋಭಾವನೆ, ದೇಶದ ಸಂಸ್ಕೃತಿ, ಧರ್ಮಪರಿಪಾಲನೆ ವಿವೇಕಾನಂದರಲ್ಲಿನ ದೊಡ್ಡ ಗುಣಗಳು ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ವಿ.ಎಸ್. ಪುರಾಣಿಕಮಠ, ಇಂದಿನ ಮಕ್ಕಳು ವಿವೇಕಾನಂದರ ತತ್ವಾದರ್ಶ ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಬಿ.ಎಚ್. ಹಿರೇಮಠ, ಶಿವಯೋಗಿ ಅರಳೆಲಿಮಠ, ರವಿಕಿರಣ ಪಾಟೀಲ, ಮುಖ್ಯೋಪಾಧ್ಯಾಯ ವಿ.ಜಿ. ಮೂಡಿಮಠ ಉಪಸ್ಥಿತರಿದ್ದರು. ಉದಯ ನಾಸಿಕ ಪ್ರಾಸ್ತಾವಿಕ ಮಾತನಾಡಿದರು. ಸಂಜನಾ ಜೋಶಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರೇಖಾ ಸ್ವಾಗತಿಸಿದರು. ವನಜಾಕ್ಷಿ ಕುರುಬರ ನಿರ್ವಹಿಸಿದರು. ಅಕ್ಕಮ್ಮ ಮೂಗೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement