ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಚಿವ ಸಂಪುಟದಿಂದ ಶಿಂಧೆ ವಜಾಗೊಳಿಸಿ

Mainashree
Updated On : 26 Jan 2013, 11:02 am

ಹಿರೇಕೆರೂರು: ಹಿಂದೂ ಹಾಗೂ ಕೇಸರಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರ್‌ಆರ್‌ಎಸ್ ಮತ್ತು ಬಿಜೆಪಿ ಉಗ್ರರ ತರಬೇತಿ ಶಿಬಿರ ನಡೆಸುತ್ತಿವೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕೆಂದು ಬಿಜೆಪಿ ಮುಖಂಡ ಪಾಲಾಕ್ಷಗೌಡ ಪಾಟೀಲ್ ಆಗ್ರಹಿಸಿದರು.
ಶಿಂಧೆ ಅವರ ಹಿಂದೂ ಹಾಗೂ ಬಿಜೆಪಿ ವಿರೋಧ ಹೇಳಿಕೆ ಖಂಡಿಸಿ ತಾಲೂಕು ಭಾರತೀಯ ಜನತಾ ಪಕ್ಷದಿಂದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಪಾಲಾಕ್ಷಗೌಡ ಪಾಟೀಲ್ ಮಾತನಾಡಿ, ಭಾರತ ರಾಷ್ಟ್ರ ಧ್ವಜದ ಒಂದು ಭಾಗವಾಗಿರುವ ಕೇಸರಿಯನ್ನು ಭಯೋತ್ಪಾದನೆಯೊಂದಿಗೆ ಥಳಕು ಹಾಕಿದ ಕಾಂಗ್ರೆಸ್ ನಾಯಕರು ಈ ನಾಡಿನ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ. ಯಾವೊಂದು ಧರ್ಮದ ಮತಕ್ಕೊಷ್ಕರ ಇಂತಹ ಅಸಂಬದ್ಧ ಹೇಳಿಕೆ ನೀಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನಿಂಗಪ್ಪ ಚಳಗೇರಿ, ಪ್ರಧಾನ ಕಾರ್ಯದರ್ಶಿ ಉಮೇಶ ಬಣಕಾರ, ಜಿಪಂ ಸದಸ್ಯ ಬಸವರಾಜ ಬೇವಿನಹಳ್ಳಿ, ಶ್ರೀಕಾಂತ ಕುಲಕರ್ಣಿ, ಉಳಿವಿಗೌಡ ವೀರನಗೌಡ್ರ, ಶಂಭು ಕರ್ಜಗಿ, ಗಂಗಾಧರ ಮಾಗನೂರು, ಸಣ್ಣಗೌಡ ಪಾಟೀಲ, ಬಸವನಗೌಡ ಯಡಚಿ, ಶರಣು ಪಾಟೀಲ, ರಾಮು ಮುರ್ಡೇಶ್ವರ, ನವೀನ ಕಣವಿ, ಸಂಜೀವ ಬಣಕಾರ, ಶಿವಯೋಗಿ ಬಸಪ್ಪನವರ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement