ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತೊಗರಿ ಹೊಲಕ್ಕೆ ಬೆಂಕಿ: ಲಕ್ಷಾಂತರ ರು. ಬೆಳೆ ನಷ್ಟ

Lingaraj Badiger
Updated On : 28 Jan 2013, 11:46 am

ಹಾನಗಲ್ಲ:  ಹೊಲಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ರು. 4 ಲಕ್ಕ್ಕೂ ಅಧಿಕ ಮೌಲ್ಯದ ತೊಗರಿ ಬೆಳೆ ನಾಶವಾದ ಘಟನೆ ತಾಲೂಕಿನ ಮಲ್ಲಿಗಾರ ಗ್ರಾಮದ ಸಮೀಪ ನಡೆದಿದೆ. ರೈತ ಮಹ್ಮದ್‌ಗೌಸ ನಾಶೀಪುಡಿ ಅವರಿಗೆ ಸೇರಿದ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಕಟಾವಿನ ಹಂತದಲ್ಲಿತ್ತು. ಆಕಸ್ಮಿಕ ಬೆಂಕಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಒಣಗಿ ನಿಂತಿದ್ದ ತೊಗರಿ ಗಿಡಗಳನ್ನು ಬೆಂಕಿಯ ಕೆನ್ನಾಲಿಗೆಗಳು ಸಂಪೂರ್ಣ ಆವರಿಸಿದ್ದರಿಂದ ಸಾಕಷ್ಟು ಶ್ರಮವಹಿಸಬೇಕಾಯಿತು. ಆರೇಳು ಬಾರಿ ಪ್ರಯತ್ನಿಸಿದ ಬಳಿಕ ವಿಸ್ತಾರವಾಗಿ ಹರಡಿದ್ದ ಬೆಂಕಿ ತಹಬಂದಿಗೆ ತರುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಹೊಲದ ಮಾಲೀಕರಾದ ರತ್ನವ್ವ ಉದಗಟ್ಟಿ ಮತ್ತು ಮಹಮದಗೌಸ ನಾಶಿಪುಡಿ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಷ್ಟ ಪರಿಹಾರ ಕೋರಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement