ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರೊ. ಚಂಪಾಗೆ ಕಸಾಪ ಆಹ್ವಾನ

Lingaraj Badiger
Updated On : 28 Jan 2013, 11:45 am

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 27
ಹಾವೇರಿ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ೤ ಚಂದ್ರಶೇಖರ ಪಾಟೀಲ ಅವರನ್ನು ಹಾವೇರಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಧಾರವಾಡದಲ್ಲಿ ಭೇಟಿ ಮಾಡಿ, ಜ. 30, 31ರಂದು ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ನಡೆಯುವ ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿದೆ.
ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಮಾತನಾಡಿ, ಪ್ರೊ೤ ಚಂಪಾ ಜಿಲ್ಲಾ ಸಮ್ಮೇಳನದ ಅಧ್ಯಕ್ಷರಾಗಲು ಸಮ್ಮತಿಸಿದ್ದು ಸಂತಸ ಉಂಟುಮಾಡಿದೆ. ಕನ್ನಡದ ಹಿರಿಯ ಚಿಂತಕ, ಸಾಹಿತಿ ಹಾಗೂ ಸಾಂಸ್ಕೃತಿಕ ಪ್ರತಿರೋಧದ ಧ್ವನಿ ಹಾವೇರಿ ಜಿಲ್ಲೆಯ ಡಂಬರಮತ್ತೂರಿನ ಚಂಪಾ ನಾಡಿಗೆಲ್ಲ ಚಿರಪರಿಚಿತರು. ತಮ್ಮದೇ ನೆಲದಲ್ಲಿ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಲಿರುವ ಚಂಪಾ ನಮ್ಮವರು ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದರು.
ಆಹ್ವಾನ ಸ್ವೀಕರಿಸಿದ ಚಂಪಾ
ಸನ್ಮಾನ ಸ್ವೀಕರಿಸಿದ ಚಂದ್ರಶೇಖರ ಪಾಟೀಲರು, ಹಾವೇರಿ ನನ್ನ ಸಾಹಿತ್ಯದ ಸೃಜನಶೀಲತೆಯ ತಾಯ್ನೆಲ. ನನ್ನ ಮೊದಲ ಗುರು ನನ್ನ ತಂದೆ. ಅನಂತರ ನನ್ನ ಕನಸುಗಳಿಗೆ ರೆಕ್ಕೆ-ಪುಕ್ಕ ಹಚ್ಚಿ ಬೆಳೆಸಿ ಹೊಸ ದಿಗಂತದೆಡೆಗೆ ಅಣಿಗೊಳಿಸಿದ ಹಾವೇರಿ ನನಗೆ ಎಲ್ಲಿಲ್ಲದ ಪ್ರೀತಿ. ನನ್ನ ವಿದ್ಯಾ ಗುರು ರಾ.ಕು., ಬಿದರಿ, ಹಿರೇಮಠ ಇನ್ನೂ ಅನೇಕರು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಕಸಾಪ ಕಾರ್ಯಕಾರಿ ಸಮಿತಿಯ ಪ್ರೀತಿಯ ಆಗ್ರಹ ನನ್ನನ್ನು ಅಧ್ಯಕ್ಷನನ್ನಾಗಿ ಒಪ್ಪಿಕೊಳ್ಳುವಂತೆ ಮಾಡಿದೆ ಎಂದರು.
ವಿರೂಪಾಕ್ಷಪ್ಪ ಪಡಿಗೋದಿ, ಪ್ರಭುಲಿಂಗಪ್ಪ ಹಲಗೇರಿ, ಎಂ.ಎಂ. ಪಾಟೀಲ, ಬಿ. ಶ್ರೀನಿವಾಸ, ಧರಣೇಂದ್ರ ಕುರಕುರಿ, ಕೃಷ್ಣಮೂರ್ತಿ, ಪ್ರೊ೤ ಎಸ್.ಪಿ. ಗೌಡರ, ಮಾಲತೇಶ ಅರಳಿಮಟ್ಟಿ, ಶಿವಾನಂದ ಸಂಗಾಪುರ, ಮಲ್ಲಿಕಾರ್ಜುನ ಶಾಂತಗಿರಿ, ಪ್ರಾಚಾರ್ಯ ಹೇಮಂತ ಗಂಟೇರ, ಜಿ.ಎನ್. ಜಾವೂರ, ವಿ.ವಿ. ಮಾತನವರ, ಎಂ.ಸಿ. ಬೆನಕನಕೊಂಡ, ಎಂ.ಎಂ. ಕರೆಣ್ಣನವರ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement