ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿವಿಧೆಡೆ ಮಹ್ಮದ್ ಪೈಗಂಬರ ಜಯಂತಿ

Lingaraj Badiger
Updated On : 28 Jan 2013, 11:46 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 27
ವಿಶ್ವಕ್ಕೆ ಶಾಂತಿ ಹಾಗೂ ಕರುಣೆಯ ಸಂದೇಶ ಸಾರಿದ ಮಹಾನ ಮಾನವತಾವಾದಿ ಮಹ್ಮದ್ ಪೈಗಂಬರ ಅವರ 1487ನೇ ಜನ್ಮ ದಿನಾಚರಣೆ ಅಂಗವಾಗಿ ನಡೆಯುವ ಈದ್ ಮಿಲಾದ್ ಹಬ್ಬವನ್ನು ಭಾನುವಾರ ಸ್ಥಳೀಯ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು.
ಪಟ್ಟಣದಲ್ಲಿರುವ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. ಮನೆ ಹಾಗೂ ಮಸೀದಿಗಳನ್ನು ವಿದ್ಯುತ್‌ದೀಪಗಳಿಂದ ಶೃಂಗರಿಸಲಾಗಿತ್ತು, ಮನೆಗಳ ಮೇಲೆ ಹಸಿರು ಧ್ವಜಗಳು ರಾರಾಜಿಸಿದವು, ಹೊಸಬಟ್ಟೆ ಧರಿಸಿ ಸಮಾಜ ಬಾಂಧವರು ಕೈಯಲ್ಲಿ ಹಸಿರು ವರ್ಣದ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಆಟೋರಿಕ್ಷಾ, ಲಾರಿ, ಕಾರು ಹಾಗೂ ದ್ವಿಚಕ್ರ ವಾಹನಗಳಿಗೆ ಹಸಿರು ವರ್ಣದ ಬೃಹತ್ ಬಾವುಟ ಕಟ್ಟಿ ಓಡಾಡುತ್ತಿರುವುದು ಕಂಡು ಬಂದಿತು.
 ಅಂಜುಮನ್-ಎ-ಇಸ್ಲಾಂ ತಾಲೂಕು ಘಟಕದ ನೇತೃತ್ವದಲ್ಲಿ ಚಮನ್ ಶಾವಲಿ ದರ್ಗಾದಿಂದ ಆರಂಭವಾದ ಮೆರವಣಿಗೆ ನಗರದ ಮುಖ್ಯರಸ್ತೆ ಪುರಸಭೆ, ಹಂಸಭಾವಿ ರಸ್ತೆಯಲ್ಲಿ ಸಾಗಿ ಈದ್ಗಾ ಮೈದಾನ ತಲುಪಿತು.
ಮೆರವಣಿಗೆಯುದ್ದಕ್ಕೂ ಕೆಲ ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತಲ್ಲದೇ ಪ್ರವಾದಿ ಮಹ್ಮದ್‌ರ ಕುರಿತು ಹಾಡು ಹೇಳುವ ಮೂಲಕ ಮುಸ್ಲಿಂ ಯುವಕರು ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಮನೆ ಮನೆಗಳಿಗೆ ಸಿಹಿ ಹಂಚಿದರು. ಅಜೀಜ್‌ಸಾಬ್ ಬಳ್ಳಾರಿ, ಬಾಬುಸಾಬ್ ಬಡಿಗೇರ, ಮಹ್ಮದ್‌ಲಿ ಹಲಗೇರಿ, ಅಲ್ಲಾಭಕ್ಷ ಕೂರಗುಂದ, ನಿಸಾರ್ ಅಹ್ಮದ್ ಹಾವನೂರು, ಅಬ್ದುಲ್‌ನ್‌ಬಿ ಕೂರಗುಂದ, ಹುಸೇನ್‌ಸಾಬ್ ದೊಡ್ಮನಿ, ರಾಜುಕಳ್ಯಾಳ, ಎಚ್.ಎಂ. ಮುಲ್ಲಾ, ಡಾ. ಸೌದಾಗರ, ಐ.ಎಂ. ಮುಲ್ಲಾ, ಮುನ್ನಾ ಎರೆಶೀಮಿ, ಹಸನ್‌ಲಿ ಹಲಗೇರಿ, ಅಜೀಜ್ ಬಿಜಾಪುರಿ ಅಬಿದ್ ಕಲ್ಮನಿ, ಐ.ಎಂ. ಮಲ್ಲೂರ ಹಾಗೂ ಧರ್ಮಗುರುಗಳು ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement