ಸಹಬಾಳ್ವೆ ನಡೆಸೋಣ: ಕೊಟ್ಟೆಪ್ಪಗೋಳ
ಸವಣೂರು: ಪ್ರಜಾಪ್ರಭುತ್ವದ ನೆಲೆಯಲ್ಲಿ ಬಾಳಿ ಬದುಕುತ್ತಿರುವ ನಮ್ಮ ದೇಶದಲ್ಲಿ ಶಾಂತಿಯ ಸಹಬಾಳ್ವೆ ಅತ್ಯಾವಶ್ಯಕ ಎಂದು ಉಪ ವಿಭಾಗಾಧಿಕಾರಿ ಶರಣಬಸಪ್ಪ ಕೊಟ್ಟೆಪ್ಪಗೋಳ ಹೇಳಿದರು.
ಸವಣೂರಿನ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 64ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಪೊಲೀಸ್, ಗೃಹರಕ್ಷಕ ದಳ, ಸ್ಕೌಟ್ಸ್ ಹಾಗೂ ಶಾಲಾ ಮಕ್ಕಳಿಂದ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಜಿಪಂ ಸದಸ್ಯೆ ಶೋಭಾ ನಿಸ್ಸೀಮಗೌಡ್ರ, ಶಂಕ್ರಣ್ಣ ದೊಡ್ಡಮನಿ, ಉಪಾಧ್ಯಕ್ಷ ಶಿವಪ್ಪ ಜಡಿ, ಸದಸ್ಯರಾದ ಚನ್ನವೀರಯ್ಯ ಸಾಲಿಮಠ, ಮಹ್ಮದ ಉಮರ ಅಳ್ನಾವರ, ಮೋಹನ ಮೆಣಸಿನಕಾಯಿ, ಎಸ್.ಎಂ. ಗಡೆಪ್ಪನವರ, ವಿರೂಪಾಕ್ಷಪ್ಪ ಸಿಂಧೂರ, ಉಮೇಶ ಕಳಕಪ್ಪನವರ, ಪರಶುರಾಮ ಈಳಗೇರ, ಹನುಮಂತಪ್ಪ ತೋಟದ, ಚಿನ್ನಪ್ಪ ದೇವಿಹೊಸೂರ, ಸಿಪಿಐ ಎಚ್.ಎಸ್. ಹೊಸಮನಿ, ಬಿಇಓ ವಿ.ಎಂ. ಮಾಳಗಿಮನಿ, ತಾಪಂ ಇಓ ಎಸ್.ಆರ್. ಪಾಟೀಲ ಇದ್ದರು.