ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಫೆ. 1ರಿಂದ ಜಿಂದಾಶಾವಲಿ ಉರೂಸ್

Rashmi Kasaragodu
Updated On : 30 Jan 2013, 10:59 am


ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ ಜಿಂದಾಶಾವಲಿಯವರ ಉರುಸು ಕಾರ್ಯಕ್ರಮವು ಫೆ. 1 ರಿಂದ 3ರ ವರೆಗೆ ಜರುಗಲಿದೆ. ಫೆ. 1 ರಂದು ಗಂಧದ ಉರುಸು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಗಂಧವು ಗ್ರಾಮದ ಅಶರಖಾನೆಯಿಂದ ಹೊರಟು ವೆಂಕಟರಮಣ ಗುಡಿಯಲ್ಲಿರುವ ಟೆಕ್ಕೆಕ್ಕೆ ಹೋಗಿ ನಂತರ ದರ್ಗಾಕ್ಕೆ ಹೋಗುವುದು. 2ರಂದು ದೊಡ್ಡ ಉರುಸು ಕಾರ್ಯಕ್ರಮ ಜರುಗಲಿದೆ. ಅಂದು ರಾತ್ರಿ 10 ಗಂಟೆಗೆ ಗೀಗೀಪದ ಕಾರ್ಯಕ್ರಮವು ದರ್ಗಾದ ಮುಂಭಾಗದ ಆವರಣದಲ್ಲಿ ನಡೆಯುವುದು. ಫೆ. 3ರಂದು ಮರಿಉರುಸು ಜರುಗಲಿದ್ದು, ಬೆಳಗ್ಗೆ 10ಕ್ಕೆ ಜೀವನಸಾಬ ಮುಲ್ಲಾ ಹಾಗೂ ಜೀವನಸಾಬ ಮುಳಗುಂದ ನೇತೃತ್ವದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಮಿಟಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಫೆ. 1ರಂದು ಮಾಸಿಕ ಸಭೆ
ಗದಗ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಮಾಸಿಕ ಸಭೆ ಫೆ. 1ರ ಬೆಳಗ್ಗೆ 11 ಗಂಟೆಗೆ ನಗರದ ಹುಡ್ಕೋ ಕಾಲನಿಯ ಸಚ್ಚಿದಾನಂದ ಮಠದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ನಿವೃತ್ತರ ಸಮಸ್ಯೆಗಳು, ಸಂಘದ ಕಟ್ಟಡಕ್ಕೆ ನಿವೇಶನ, ನಿವೃತ್ತರಿಗೆ ವೈದ್ಯಕೀಯ ಭತ್ಯೆ ಕುರಿತು ಚರ್ಚಿಸಲಾಗುವುದು. ಸದಸ್ಯರು ತಪ್ಪದೇ ಸಭೆಗೆ ಹಾಜರಾಗಲು ಜಿಲ್ಲಾ ಹೆಚ್ಚುವರಿ ಕಾರ್ಯದರ್ಶಿ ರಾಜಶೇಖರ ಕರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹೇಶ ಪಾಟೀಲ್ ನೇಮಕ
ಹಾನಗಲ್ಲ: ಅಖಿಲ ಭಾರತ ಯೋಗೀಶ್ವರ ಯಾಜ್ಞವಲ್ಕ್ಯ ಮಹಾಮಂಡಲದ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಪಟ್ಟಣದ ಮಹೇಶ ಪಾಟೀಲ ನೇಮಕಗೊಂಡಿದ್ದಾರೆ. ಮಹಾಮಂಡಲದ ಜಿಲ್ಲಾಧ್ಯಕ್ಷ ಎನ್.ಎಸ್. ಚಿನ್ನಮುಳಗುಂದ ಈ ನೇಮಕಗೊಳಿಸಿದ್ದು, ಸಮಾಜದ ಸಂಘಟನೆಗೆ ಮುಂದಾಗಬೇಕೆಂದು ಆದೇಶಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement