ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬ್ಯಾಡಗಿ: ಹಾಸ್ಯದ ಹೊನಲಲ್ಲಿ ತೇಲಿಸಿದ ಇಂದುಮತಿ ಸಾಲಿಮಠ

Rashmi Kasaragodu
Updated On : 30 Jan 2013, 10:58 am





ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜ. 29
ಸ್ಥಳೀಯ ಬನಶಂಕರಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಸಾವಿರಾರು ಪ್ರೇಕ್ಷಕರನ್ನು ನಗೆ ಹೊನಲಿನಲ್ಲಿ ತೇಲಿಸಿದರು.
ವಿದ್ಯಾರ್ಥಿಗಳನ್ನು ಕುರಿತು, ಮೊಬೈಲ್, ಮಿಸ್ಕಾಲ್, ಫ್ರೀ ಮೆಸೇಜ್‌ನಿಂದ ಲೈಫ್ ಮಿಸ್ ಮಾಡ್ಕೋಬ್ಯಾಡ್ರಿ, ಪರೀಕ್ಷೆಯಲ್ಲಿ ಫೇಲ್ ಆಗೇವಂತ ಸಾಯಕ್ಕ ಹೋಗಬ್ಯಾಡ್ರಿ, ಇದರಿಂದ ಏನ್ ಸಾಧಿಸ್ತೀರಿ ಎಂದು ಪ್ರಶ್ನಿಸಿ, ಚಿಂತನೆಗೂ ಹಚ್ಚಿದರು.
ಗುಟಕಾ ಸೇವನೆ ಮುಂತಾದ ದುಶ್ಚಟಗಳಿಂದ ಸಾವಿರಾರು ಯುವಕರು ಕಾಯಿಲೆಗೆ ತುತ್ತಾಗಿ, ಪೋಷಕರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಮದ್ಯಪಾನ ಕೌಟುಂಬಿಕ ನೆಮ್ಮದಿ ಕಸಿದುಕೊಳ್ಳುತ್ತದೆ. ಅತ್ತೆ-ಸೊಸೆ ಹೊಂದಾಣಿಕೆಯಿಂದ ಬಾಳದಿದ್ದರೆ ಕುಟುಂಬದ ನೆಮ್ಮದಿಗೆ ಭಂಗ ಬರುತ್ತದೆ ಎಂಬುದನ್ನೂ ಹಾಸ್ಯ ಪ್ರಸಂಗಗಳ ಮೂಲಕ ವಿವರಿಸಿದರು.
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದು ಮುಖ್ಯವಲ್ಲ. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಶೈಕ್ಷಣಿಕ ವ್ಯವಸ್ಥೆ ಜಾರಿಯಾಗಬೇಕು. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದಕ್ಕೆ ಸೂಕ್ತ ಮಾರ್ಗದರ್ಶನ ಬೇಕಾಗಿದೆ ಎಂದರು.
ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಸುಮಾರು ಎರಡು ತಾಸು ಸಭಿಕರನ್ನು ಅವರು ಹಿಡಿದಿಟ್ಟರು. ಬನಶಂಕರಿ ಟ್ರಸ್ಟ್ ಅಧ್ಯಕ್ಷ ಡಾ೤ ಎಸ್.ಜಿ. ಮುದ್ದಪ್ಪನವರ, ಸದಸ್ಯರಾದ ಬಿ.ಆರ್. ಹೊತ್ತಿಗಿಗೌಡ್ರ, ಬನಪ್ಪ ವರದಣ್ಣನವರ, ಎಸ್.ಎಸ್. ಕೋರ್ಲಹಳ್ಳಿ ಉಪಸ್ಥಿತರಿದ್ದರು. ವಸಂತ ಕುಂಚೂರು ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement