ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಮೈಲಾರಲಿಂಗೇಶ್ವರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Lingaraj Badiger
Updated On : 2 Jul 2013, 11:17 am

ಹಾನಗಲ್ಲ: ಹಾನಗಲ್ಲಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ಮೈಲಾರಲಿಂಗೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ದಾನಪ್ಪ ಗಂಟೇರ ಹಾಗೂ ಬಸವಂತಪ್ಪ ಕರಿಯಪ್ಪ ತಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕ ಶಂಬಣ್ಣ ಶೆಟ್ಟರ್ ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ದಾನಪ್ಪ ಗಂಟೇರ ಹಾಗೂ ಬಸವಂತಪ್ಪ ತಳವಾರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ ಎಂದು ಶಂಬಣ್ಣ ಶೆಟ್ಟರ್ ತಿಳಿಸಿದ್ದಾರೆ.
ನಿರ್ದೇಶಕರಾದ ದಿನೇಶ ಲಮಾಣಿ, ಜಗದೀಶ ಮಾಯಣ್ಣನವರ, ಗಿರೀಶ ಮುದುಕಣ್ಣನವರ, ಮಂಜುಳಾ ದಿಳ್ಳೆಪ್ಪನವರ, ಸಿದ್ಧವ್ವ ಬೊಗಳೆ, ರೇಣುಕಾ ಶೆಟ್ಟರ್, ದುರ್ಗಪ್ಪ ಗಡ್ಡೇರ, ಶೀವಲೀಲಾ ಗಂಟೇರ ಸಭೆಯಲ್ಲಿ ಉಪಸ್ಥಿತರಿದ್ದರು.
ಅವಿರೋಧ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ವಿವಿದೋದ್ಧೇಶ ಸಹಕಾರಿ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವರ್ತಕರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
ಕಾರ್ಯಾರಂಭ: ಹಾನಗಲ್ ನಗರದ ಕಿತ್ತೂರು ಚನ್ನಮ್ಮ ರಸ್ತೆಯ ಹಳೆ ಕೆಸಿಸಿ ಬ್ಯಾಂಕ್ ಬಿಲ್ಡಿಂಗ್‌ನಲ್ಲಿ ಜು. 2ರಂದು ಬೆಳಗ್ಗೆ 11 ಗಂಟೆಗೆ ಪೂಜೆಯ ಮೂಲಕ ಶ್ರೀ ಮೈಲಾರಲಿಂಗೇಶ್ವರ ವಿವಿಧೋದ್ದೇಶ ಸೌಹಾರ್ದ ಸಂಘದ ಕಚೇರಿ ಕಾರ್ಯಾರಂಭ ಸಮಾರಂಭ ನಡೆಯಲಿದೆ.
ಅಧ್ಯಕ್ಷರು, ಉಪಾಧ್ಯಕ್ಷರು, ಸಂಘದ ಪದಾಧಿಕಾರಿಗಳು ತಪ್ಪದೇ ಹಾಜರಾಗಬೇಕು ಎಂದು ಸಂಘದ ನಿರ್ದೇಶಕ ಶಂಬಣ್ಣ ಶೆಟ್ಟರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement