ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ

Lingaraj Badiger
Updated On : 3 Jul 2013, 11:54 am

ಹಾವೇರಿ: ಪ್ರಸಕ್ತ ಶೈಕ್ಷಣಿಕ ವರ್ಷದ 6ನೇ ತರಗತಿ ಪ್ರವೇಶಕ್ಕಾಗಿ ಫೆಬ್ರವರಿ ತಿಂಗಳಲ್ಲಿ ನಡೆದ ಜವಾಹರ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ-2013ರ ಫಲಿತಾಂಶ ಪ್ರಕಟವಾಗಿದ್ದು, ಸದರಿ ಫಲಿತಾಂಶವನ್ನು ವಿದ್ಯಾಲಯದ ಸೂಚನಾ ಫಲಕದಲ್ಲಿ ಹಾಗೂ ವಿದ್ಯಾಲಯದ ವೆಬ್‌ಸೈಟ್ ಡಿಡಿಠ://ಞಟಿಝಛಢಜ್ಠ್ಝ.್ಜ್ಟಢ.್ಝಟಿನಲ್ಲಿ ವಿಕ್ಷೀಸಬಹುದು.
ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳ ಪಾಲಕರು 4 ಜುಲೈ, 2013ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ಒಳಗಾಗಿ ಜವಾಹರ ನವೋದಯ ವಿದ್ಯಾಲಯ, ಮಹಾರಾಜಪೇಟ, ತಾ: ಹಾನಗಲ್ಲ ಇಲ್ಲಿಗೆ ಖುದ್ದಾಗಿ ಆಗಮಿಸಿ, ಪ್ರವೇಶಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕೊಂಡೊಯ್ಯಬೇಕು. ಆಯ್ಕೆಯಾದ ಅಭ್ಯರ್ಥಿಗಳು ಈ ಹಿಂದೆ ತಾವು ಅರ್ಜಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ದಾಖಲೆಗಳನ್ನು ಒದಗಿಸಬೇಕಾಗುವುದು.
ದಾಖಲೆಗಳನ್ನು ಒದಗಿಸಲು ಅಸಮರ್ಥರಾದಲ್ಲಿ ಅವರ ಆಯ್ಕೆಯನ್ನು ರದ್ದುಪಡಿಸಲಾಗುವುದು. ಇದಕ್ಕೆ ವಿದ್ಯಾಲಯವು ಯಾವುದೇ ರೀತಿಯ ಜವಾಬ್ದಾರಿಯಾಗಿರುವುದಿಲ್ಲ ಎಂದು ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
ಪಾಲಕರು ವಿದ್ಯಾಲಯಕ್ಕೆ ಆಗಮಿಸುವಾಗ ಪ್ರವೇಶ ಪತ್ರಗಳನ್ನು ಕಡ್ಡಾಯವಾಗಿ ತರತಕ್ಕದ್ದು.
ಹೆಚ್ಚಿನ ಮಾಹಿತಿಯನ್ನು ವಿದ್ಯಾಲಯದ ಕಚೇರಿ ವೇಳೆಯಲ್ಲಿ ಪಡೆಯಬಹುದೆಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement