ಇಂದು ತ್ರೈಮಾಸಿಕ ಕೆಡಿಪಿ
ರಾಣಿಬೆನ್ನೂರು: ಇಲ್ಲಿನ ತಾಪಂ ಸಭಾ ಭವನದಲ್ಲಿ ಜು. 5ರಂದು ಬೆಳಗ್ಗೆ 11ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ ಕರೆಯಲಾಗಿದೆ. ಶಾಸಕ ಕೆ.ಬಿ. ಕೋಳಿವಾಡ ಸಭೆ ಅಧ್ಯಕ್ಷತೆ ವಹಿಸುವರು. ಕಾರಣ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ತಪ್ಪದೆ ತಮ್ಮ ಇಲಾಖೆಯಿಂದ ಸಾಧಿಸಿರುವ ಸಾಧನೆಗಳ ಮಾಹಿತಿಗಳೊಂದಿಗೆ ಸಭೆಗೆ ಆಗಮಿಸಬೇಕೆಂದು ತಾಪಂ ಪ್ರಭಾರಿ ಕಾರ್ಯನಿರ್ವಣಾಧಿಕಾರಿ ಡಾ ನಾಗನಗೌಡ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.