ಇಂದು ನೂತನ ಪದಾಧಿಕಾರಿಗಳ ಪದಗ್ರಹಣ
ರಾಣಿಬೆನ್ನೂರು: 2013-14ನೇ ಸಾಲಿಗಾಗಿ ರೋಟರಿ ಹಾಗೂ ಇನ್ನರ್ವ್ಹೀಲ್ ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಜು. 5ರಂದು ಸಂಜೆ 6-30ಕ್ಕೆ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜರುಗಲಿದೆ.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಉಮೇಶ ಗುಂಡಗಟ್ಟಿಯವರಿಗೆ ಹಾಗೂ ಇನ್ನರ್ವ್ಹೀಲ್ ಸಂಸ್ಥೆ ಅಧ್ಯಕ್ಷರಾದ ಭಾರತಿ ಜಂಬಗಿಯವರಿಗೆ, ಪದಾಧಿಕಾರಿಗಳಿಗೆ ಗದಗ ಜಿಲ್ಲಾ ಗೌವರ್ನರ್ ಡಾ ಎನ್.ಬಿ. ಪಾಟೀಲ, ಜಿಲ್ಲಾ ಚೇರ್ಮನ್ ಮೀನಾ ಗುಪ್ತಾ ಪ್ರಮಾಣ ವಚನ ಬೋಧಿಸುವರು. ಅತಿಥಿಯಾಗಿ ಮಾಜಿ ಶಾಸಕ ಜಿ. ಶಿವಣ್ಣ ಆಗಮಿಸುವರು. ಡಾ ನೀಲಕಂಠ ಅಂಗಡಿ ರೋಟರಿ ಸಂಸ್ಥೆ ಕಾರ್ಯದರ್ಶಿಯಾಗಿ ಸರಳಾ ಜಂಬಗಿ, ಇನ್ನರ್ವ್ಹೀಲ್ ಸಂಸ್ಥೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.