ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಮೂಹಿಕ ಜವಾಬ್ದಾರಿಯಿಂದ ಅರಣ್ಯ ರಕ್ಷಣೆ: ಶೆಟ್ಟರ್

Lingaraj Badiger
Updated On : 5 Jul 2013, 11:05 am

ಬ್ಯಾಡಗಿ: ಕಠಿಣ ಕಾನೂನುಗಳಿಂದ ಅರಣ್ಯ ಸಂರಕ್ಷಣೆ ಸಾಧ್ಯವಿಲ್ಲ. ಸಮುದಾಯದ ಸಹಭಾಗಿತ್ವ ಹಾಗೂ ಸಾಮೂಹಿಕ ಜವಾಬ್ದಾರಿಯಿಂದ ಮಾತ್ರ ವನ್ಯ ಸಂಪತ್ತು ಉಳಿಸಿಕೊಳ್ಳಲು ಯೋಚಿಸಬೇಕಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಣ್ಣ ಶೆಟ್ಟರ್ ಹೇಳಿದರು.
ಪಟ್ಟಣದ ಎಸ್‌ಪಿಎಫ್ ದೊಡ್ಡಗೌಡ್ರ ಪ್ರೌಢಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಅರಣ್ಯ ಸಂಪತ್ತು ನಾಶದಿಂದ ಮನುಕುಲಕ್ಕೆ ಆಪತ್ತು ತಪ್ಪಿದ್ದಲ್ಲ. ಪರಿಸರ ಉಳಿವಿಗೆ ಪ್ರತಿಯೊಬ್ಬರು ಪಣ ತೊಡಬೇಕಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಶಾಲಾ ಅವರಣ, ಮನೆ ಸುತ್ತಲೂ ಮರ, ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡುವಂತೆ ಸಲಹೆ ನೀಡಿದರು. ಪ್ರಾಚಾರ್ಯ ಎಲ್.ವಿ. ಮಾಯೇರ, ಎಸ್.ಎನ್. ಮರಿಗೌಡ್ರ, ಪಿ.ಎಂ. ಗಂಗವ್ವನವರ, ಸಿ.ಎಸ್. ಪಾಟೀಲ, ಎಸ್.ವಿ. ಮುದ್ದಪ್ಪಳವರ, ಪಾರ್ವತಿ ಕೊರಟಿಕೇರಿ, ಡಿ.ಎಸ್. ಲಮಾಣಿ, ಎಸ್.ಪಿ. ದ್ಯಾಮನಗೌಡ್ರ. ಕೆಂಡದಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement