ದೇಶ ಅಭಿವೃದ್ಧಿಗೆ ಯುವಕರು ಜಾಗೃತರಾಗಬೇಕು
ಶಿರಹಟ್ಟಿ: ಯುವಕರು ಸದಾ ಕ್ರಿಯಾಶೀಲರಾಗಿ ದೇಶದ ಪ್ರಗತಿಗೆ ಶ್ರಮಿಸಬೇಕು. ಗ್ರಾಮೀಣ ಪ್ರದೇಶದ ಯುವಕರು ದೇಶಾಭಿಮಾನ ಹಾಗೂ ಸೇವಾ ಮನೋಭಾವನೆ ಬೆಳೆಸಿಕೊಂಡು ರಾಷ್ಟ್ರ ಮುನ್ನಡೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ನೆಹರು ಯುವ ಕೇಂದ್ರ ಸಂಘಟನೆಯ ಮಹಾ ನಿರ್ದೇಶಕ ಸಲೀಂ ಅಹ್ಮದ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಜ. ಫಕೀರೇಶ್ವರ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಜ. ಫಕೀರ ಸಿದ್ಧರಾಮ ಮಹಾಸ್ವಾಮಿಗಳ ಆಶೀರ್ವಾದ ಪಡೆದು, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಜ. ಫಕೀರ ಸಿದ್ಧರಾಮ ಶ್ರೀಗಳು, ಪಪಂ ಸದಸ್ಯ ಹುಮಾಯುನ ಮಾಗಡಿ, ಸಂತೋಷ ಕುರಿ ಮಾತನಾಡಿದರು. ವೈ.ಎಸ್. ಪಾಟೀಲ, ಎನ್.ಆರ್. ಕುಲಕರ್ಣಿ, ಕೆ.ಎನ್. ಸ್ವಾಮಿ, ಎಂ.ಸಿ. ಹಿರೇಮಠ, ಮಂಜುನಾಥ ಘಂಟಿ, ಡಾ. ಸುನೀಲ ಬುರಬುರೆ, ಪರಮೇಶಿ ಪರಬ, ವೀರಣ್ಣ ಮಠಪತಿ, ಯಲ್ಲಪ್ಪಗೌಡ ಅಣ್ಣಿಗೇರಿ, ಸುಧೀರ ಜಮಖಂಡಿ ಇದ್ದರು.