ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವೈದ್ಯರ ಸಲಹೆಯಿಂದ ರೋಗ ಮುಕ್ತರಾಗಿ: ಡಾ. ಬಸವರಾಜ

Lingaraj Badiger
Updated On : 8 Jul 2013, 11:34 am

ರಾಣಿಬೆನ್ನೂರು:  ತಮಗರಿವಿಲ್ಲದೆ ತಗುಲಿದ ರೋಗಗಳ ಕುರಿತು ನಿರ್ಲಕ್ಷ್ಯ ತೊರದೆ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆ ಪಡೆದು ರೋಗದಿಂದ ಮುಕ್ತರಾಗಲು ಮಹಿಳೆಯರು ಮುಂದಾಗಬೇಕೆಂದು ಡಾ೤ ಬಸವರಾಜ ಕೇಲಗಾರ ಹೇಳಿದರು.
ಸಮುದಾಯ ಆರೋಗ್ಯ ಹಾಗೂ ಕುಟುಂಬ ಯೋಜನಾ ಕೇಂದ್ರ ಮತ್ತು ಮಹಿಳಾ ವಿದ್ಯಾವರ್ಧಕ ಸಂಘ ರಾಣಿಬೆನ್ನೂರು ಆಶ್ರಯದಲ್ಲಿ ತಾಲೂಕಿನ ಗಂಗಾಜಲ ತಾಂಡಾದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೆಸರಾಂತ ಮಹಿಳಾ ವೈದ್ಯರಾದ ಡಾ೤ ರಂಜನಾ ನಾಯಕ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು, ಕುಟುಂಬ ಯೋಜನಾ ಕಾರ್ಯಕ್ರಮದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಕೊಂಡವರಿಗೆ ತಗುಲಬಹುದಾದ ರೋಗಗಳ ನಿಯಂತ್ರಣಕ್ಕಾಗಿ ಮಹಿಳೆಯರು ಅನುಸರಿಸಬೇಕಾದ ಕ್ರಮಗಳ ಕುರಿತು ಸೂಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮ ಸಂಘಟಿಸಿದ್ದ ಸಮುದಾಯ ಆರೋಗ್ಯ ಕೇಂದ್ರದ ಸದಸ್ಯರಾದ ರುಕ್ಮೀಣಿದೇವಿ ಕಳಸದ ಮಾತನಾಡಿ, ತಾಲೂಕಿನ ಗಂಗಾಜಲ ತಾಂಡಾ, ಬಸಲಿಕಟ್ಟಿ ತಾಂಡಾ ಹಾಗೂ ಗೋವಿಂದ ಬಡಾವಣೆಯಲ್ಲಿ ನಡೆಸಿದ ಶಿಬಿರದಲ್ಲಿ 80 ಗರ್ಭಿಣಿಯರು, 40  ಬಾಣಂತಿಯರನ್ನು ಕುಟುಂಬ ಯೋಜನಾ ಕಾರ್ಯಕ್ರಮದಲ್ಲಿ ಶಸ್ತ್ರ ಚಿಕಿತ್ಸೆ ಪಡೆದ 34 ಮಹಿಳೆಯರು ಹಾಗೂ ವಿವಿಧ ರೋಗಗಳಿಂದ ಬಳಲುತ್ತಿದ್ದ 56 ಮಹಿಳೆಯರನ್ನು ಈ ಕಾರ್ಯಕ್ರಮದಲ್ಲಿ ಉಚಿತವಾಗಿ ವೈದ್ಯಕಿಯ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಯಿತು ಎಂದು ತಿಳಿಸಿದರು.
 ಡಾ೤ ನಳಿನಿ ಸಾಲ್ಮನಿ, ಡಾ೤ ಸುಗುಣಾ ಚಳಗೇರಿ ಉಚಿತ ಸೇವೆ ನೀಡಿದರು. ಸಮುದಾಯ ಆರೋಗ್ಯ ಕೇಂದ್ರದ ಸದಸ್ಯರಾದ ಗೀತಾ ಜಂಬಗಿ, ಪೂಜಾ ಕೇಲಗಾರ, ವಿಜಯಾ ನಾಡಿಗೇರ, ಸುಲೋಚನಾ ಖನ್ನೂರು, ಪ್ರಕಾಶ ಜೈನ, ಗ್ರಾಮ ಪಂಚಾಯಿತಿ ಸದಸ್ಯ, ಸಮಾಜ ಸೇವಕ ಮಾರುತಿ ರಾಠೋಡ ಹಾಗೂ ದಾವಣಗೇರಿ ಔಷಧಿ ವ್ಯಾಪಾರಸ್ಥರು  ಶಿಬಿರಕ್ಕೆ ಸಹಕಾರ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement