ರಿಹಾನಾ ಶೇಖ್ ತಾಪಂ ಅಧ್ಯಕ್ಷೆ
ಹಾವೇರಿ: ಇಲ್ಲಿನ ತಾಪಂ ನೂತನ ಅಧ್ಯಕ್ಷರಾಗಿ ಅಗಡಿ ಕ್ಷೇತ್ರದ ರಿಹಾನಾ ಚಾಂದ ಶೇಖ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೋಮವಾರ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ನಡೆದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಈ ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಸಪ್ಪ ಕಳಸೂರ ಮರು ಆಯ್ಕೆಯಾಗಿದ್ದಾರೆ. ತಾಪಂನ ಒಟ್ಟು 20 ಸದಸ್ಯರ ಪೈಕಿ 19 ಸದಸ್ಯರು ಕೆಜೆಪಿಯವರಾಗಿದ್ದು, ಒಬ್ಬ ಸದಸ್ಯರು ಮಾತ್ರ ಕಾಂಗ್ರೆಸ್ಸಿಗರಾಗಿದ್ದಾರೆ. ಕೆಜೆಪಿ ಸದಸ್ಯರೆಲ್ಲರೂ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ತಾಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ಶೇಖ್, ಕೆಜೆಪಿಯಲ್ಲಿ ನಡೆದ ಆಂತರಿಕ ಬೆಳೆವಣಿಗೆಗಳು ಶೇಖ್ ಅಧ್ಯಕ್ಷ ಸ್ಥಾನ ಕೈತಪ್ಪಲು ಕಾರಣವಾಗಿತ್ತೆನ್ನಲಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೆ ನಾಮಪತ್ರ ಸಲ್ಲಿಸಿದ್ದರಿಂದ ಶೇಖ್ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಕಳಸೂರನ್ನು ಚುನಾವಣಾಧಿಕಾರಿ, ಹಾವೇರಿ ಉಪ ವಿಭಾಗಾಧಿಕಾರಿ ಕೆ. ಚನ್ನಬಸಪ್ಪ ಘೋಷಿಸುವ ಮೂಲಕ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದರು.