ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಕ್ಷರತೆಯಿಂದ ಸರ್ವರ ಪ್ರಗತಿ ಸಾಧ್ಯ

Lingaraj Badiger
Updated On : 9 Jul 2013, 11:46 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 8
ಹಿಂದುಳಿದ ಸಮಾಜದಲ್ಲಿ ಗುರುತಿಸಿಕೊಂಡು ಸಾಕ್ಷರರಾದವರು ಉಳಿದವರಿಗೆ ಸಾಕ್ಷರತೆಯ ಮಹತ್ವ ನೀಡಿದಲ್ಲಿ ಸಮಾಜದಲ್ಲಿ ಸರ್ವರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ವಾಲ್ಮೀಕಿ ನಾಯಕ ಸಮಾಜದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಾಲ್ಮೀಕಿ ನಾಯಕ ಮಹಾಸಭಾ ಗ್ರಾಮ ಘಟಕ ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದುಳಿದವರ ಏಳ್ಗೆಗೆ ಶ್ರಮಿಸಿ:  ವಾಲ್ಮೀಕಿ ನಾಯಕ ಸಮಾಜದಲ್ಲಿ ಗುರುತಿಸಿಕೊಂಡು ಸಾಕ್ಷರರಾಗಿ ಸರ್ಕಾರದ ವಿವಿಧ ಇಲಾಖೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿರುವವರು, ತಮ್ಮ ಸ್ವಾರ್ಥ ಹಾಗೂ ನೌಕರಿ ಹೆಸರಿನಲ್ಲಿ ಊರು ಬಿಟ್ಟು ಪಟ್ಟಣಗಳಲ್ಲಿ ವಾಸಿಸುವುದರೊಂದಿಗೆ ಹುಟ್ಟಿ ಬೆಳೆದಿರುವ ಗ್ರಾಮಗಳನ್ನು ಮರೆತು ತಮ್ಮ ಸ್ವಾರ್ಥಕ್ಕಾಗಿ ಪಟ್ಟಣಗಳಲ್ಲಿ ಬದುಕುವುದಕ್ಕಿಂತ ಗ್ರಾಮದಲ್ಲಿ ಹಿಂದುಳಿದಿರುವವರ ಏಳ್ಗೆಗಾಗಿ ಚಿಂತಿಸಬೇಕು.
ಸಮಾಜ ಅಭಿವೃದ್ಧಿಯಾಗಲಿ: ಸಮಾಜ ನನಗೇನು ಕೊಟ್ಟಿದೆ ಎಂದು ಹೇಳುವ ಬದಲು ಸಮಾಜಕ್ಕಾಗಿ ನಾನೇನು ಮಾಡಿರುವೆನೆಂದು ತಮ್ಮೊಳಗೆ ತಾವು ಚಿಂತಿಸುವುದರೊಂದಿಗೆ ಸಮಾಜಾಭಿವೃದ್ಧಿಗೆ ಸರ್ವರೂ  ಮುಂದಾಗಬೇಕೆಂದು ಕೆ.ಬಿ. ಕೋಳಿವಾಡ ಹೇಳಿದರು.
ಮಕ್ಕಳೆ ಆಸ್ತಿಯೆಂದರಿಯಿರಿ: ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಪಿಎಂಸಿ ಅಧ್ಯಕ್ಷ ಹಾಗೂ ತಾಲೂಕು ವಾಲ್ಮೀಕಿ ಸಮಾಜದ ಮುಖಂಡ ಸಣ್ಣ ತಮ್ಮಪ್ಪ ಬಾರ್ಕಿ ಮಾತನಾಡಿ, ಸಂಘಟನೆಯಿಂದ ಸರ್ವವನ್ನು ಸಾಧಿಸಲು ಸಾಧ್ಯವೆಂದರಿತು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಾಕ್ಷರತೆಯೊಂದೆ ಮುಖ್ಯ ಕಾರಣವೆಂದರಿತು, ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕಿಂತ ಮಕ್ಕಳೆ ಆಸ್ತಿ ಎಂದರಿಯಬೇಕಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಸರ್ವರು ಮುಂದಾಗಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಮಂಜುನಾಥ ಓಲೇಕಾರ ಮಾತನಾಡಿ, ಸರ್ಕಾರದಿಂದ ಸಮಾಜ ಬಾಂಧವರಿಗೆ ಸಿಗುವ ಸೌಲಭ್ಯಗಳ ಕುರಿತು ವಿವರಿಸಿ, ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ, ನಗರಸಭಾ ಸದಸ್ಯರಾದ ಶಶಿಧರ ಬಸೆನಾಯ್ಕರ, ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಗಣೇಶ ದೇವರಮನಿ, ಇಟಗಿ ಗ್ರಾಮದ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ವೀರೇಶ ಬಸೆನಾಯ್ಕರ, ಹಾಲೇಶ ಆರ್.ಕೆ,. ಎಪಿಎಂಸಿ ಉಪಾಧ್ಯಕ್ಷ ಮಹೇಶ ಮಲ್ಲಾಪುರ, ಜಿಲ್ಲಾ ರೈತ ಸಂಘದ ಸಂಚಾಲಕ ಚಂದ್ರಪ್ಪ ಬೇಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement