ಬಣಕಾರ ಅಭಿಮಾನಿಬಳಗದಿಂದ ತಟ್ಟೆ ದೇಣಿಗೆ
ಹಿರೇಕೆರೂರು: ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿನ ಸೌಲಭ್ಯ ಉಪಯೋಗಿಸಿಕೊಂಡು ಉತ್ತಮ ರೀತಿಯಲ್ಲಿ ಅಧ್ಯಯನ ನಡೆಸಿ ಉನ್ನತ ಸಾಧನೆ ಮಾಡಬೇಕು ಎಂದು ಯು.ಬಿ. ಬಣಕಾರ ಅಭಿಮಾನಿ ಬಳಗದ ಉಪಾಧ್ಯಕ್ಷ ಮಹೇಶ ಗುಬ್ಬಿ ತಿಳಿಸಿದರು.
ಬಗ್ಗೆ ಶಾಸಕ ಅವರು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಶಾಸಕ ಯು.ಬಿ.ಬಣಕಾರ ಅಭಿಮಾನಿ ಬಳಗದ ವತಿಯಿಂದ ಊಟದ ತಟ್ಟೆಗಳನ್ನು ಕೊಡುಗೆಯಾಗಿ ವಿತರಿಸಿ ಮಾತನಾಡಿ, ಕಳೆದ ವಾರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿ ಶಾಸಕ ಯು.ಬಿ. ಬಣಕಾರ ತಟ್ಟೆಗಳನ್ನು ಕೊಡಿಸುವುದಾಗಿ ವಾಗ್ದಾನ ನೀಡಿದ್ದರು. ಆ ಪ್ರಕಾರ ಇಂದು ವಿತರಿಸಲಾಗುತ್ತಿದೆ ಎಂದರು.
ಅಭಿಮಾನಿ ಬಳಗದ ಕಾರ್ಯದರ್ಶಿ ಸಿದ್ದನಗೌಡ ನರೇಗೌಡ್ರ, ತಾಪಂ ಸದಸ್ಯ ಶಿವಣ್ಣ ಗಡಿಯಣ್ಣನವರ, ಪಪಂ ಸದಸ್ಯರಾದ ರಘು ಮಾಳಮ್ಮನವರ, ರವಿ ಪುಟ್ಟಪ್ಪಗೌಡ್ರ, ಮುಜೀಬ್ ರಿಕಾರ್ಟಿ, ಮಲ್ಲಿಕಾರ್ಜುನ ಪುಟ್ಟಪ್ಪಗೌಡ್ರ, ಕೊಟ್ರೇಶ ಕಾಟೇನಹಳ್ಳಿ, ಕರಬಸಪ್ಪ ತಿಪ್ಪಕ್ಕಳ್ಳವರ, ನಿಂಗಪ್ಪ ದಂಡ್ಗೀಹಳ್ಳಿ, ರವಿ ಶಿದ್ದಪ್ಪಗೌಡ್ರ, ಪ್ರಭು ಮಳವಳ್ಳಿ, ರಾಮು ಚಿಗಮೊರದ, ರವಿ ಚಿಂದಿ, ಮಾಲತೇಶ ಮಾಂಡ್ರೆ, ಸುರೇಶ ಕಲಾಲ, ವೆಂಕಟೇಶ ಉಪ್ಪಾರ, ಮುಖ್ಯ ಶಿಕ್ಷಕರಾದ ಸಿ.ಆರ್. ಕವಲಿ, ಎಸ್.ಡಿ. ಬಣಕಾರ ಇತರರು ಇದ್ದರು.