ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಮಾಜಕ್ಕೆ ಶರಣರ ಮಾರ್ಗದರ್ಶನ ಅಗತ್ಯ

Lingaraj Badiger
Updated On : 10 Jul 2013, 11:56 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 9
ಪ್ರಸ್ತುತ ಸಮಾಜಕ್ಕೆ ಶರಣರ, ದಾರ್ಶನಿಕರ ಮಾರ್ಗದರ್ಶನ ಅತ್ಯವಶ್ಯವಾಗಿದೆ ಎಂದು ನೆಗಳೂರು ಹಿರೇಮಠದ ಗುರುಶಾಂತ ಶಿವಯೋಗಿಶ್ರೀಗಳು ಹೇಳಿದರು.
ಮೋಟೆಬೆನ್ನೂರಿನ ಜರುಗಿದ ಲಿಂ. ಮ.ನಿ.ಪ್ರ. ಗುಬ್ಬಿ ನಂಜುಂಡೇಶ್ವರ ಶ್ರೀಗಳ 37ನೇ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜೀವನದಲ್ಲಿ ಯಶಸ್ಸು ಪಡೆಯಲು ಧರ್ಮ ಅವಶ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಜಾತಿ, ಭಾಷೆ, ಪ್ರಾಂತೀಯ ನೆರಳಿನಲ್ಲಿರುವ ಧರ್ಮಾಧಿಕಾರಿಗಳ ಪ್ರಚೋದನೆಯಿಂದ ಭಕ್ತರಲ್ಲಿ ಪ್ರತ್ಯೇಕತೆ ಭಾವನೆಗಳು ಬೆಳೆಯಲಾರಂಭಿಸಿವೆ. ಇದರಿಂದ ಸಮಾಜ ವಿಘಟನೆಯತ್ತ ಸಾಗಿದೆ ಎಂದು ವಿಷಾದಿಸಿದರು.
ವಿಶ್ವ ಕಲ್ಯಾಣಕ್ಕಾಗಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ದಾರ್ಶನಿಕರು, ಶರಣರು, ಪೀಠಾಧಿಪತಿಗಳು ಹಾಗೂ ಮಠಾಧೀಶರು, ರಾಜಪ್ರಭುತ್ವದ ಕಾಲದಿಂದ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯವರೆಗೆ ಸಮಾಜ ವಿಘಟನೆಗೊಳ್ಳದಂತೆ ನೋಡಿಕೊಂಡಿದ್ದಾರೆ ಎಂದರು.
ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯದಲ್ಲಿ ಧರ್ಮ ಸೇರ್ಪಡೆಯಾಗುವುದು ಸೂಕ್ತ. ಆದರೆ ಧರ್ಮದಲ್ಲಿ ರಾಜಕೀಯ ಬೇಡ ರಾಜಕೀಯ ಹಿನ್ನೆಲೆ ಇರುವ ವ್ಯಕ್ತಿಗಳು ಮಠಾಧೀಶರನ್ನು ಭೇಟಿಯಾದ ತಕ್ಷಣ ಅದಕ್ಕೊಂದು ವಿಶೇಷ ಅರ್ಥ ಕಲ್ಪಿಸುತ್ತಿರುವುದು ವಿಷಾದನೀಯ ಎಂದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಶ್ರೀಗಳ ಸಕಲ ವಾದ್ಯ ವೈಭವಗಳೊಂದಿಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು. ನವೋದಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುಟ್ಟನಗೌಡ ಪಾಟೀಲ, ಮುಖ್ಯ ಶಿಕ್ಷಕ ಎಸ್.ಎಂ. ಪಾಟೀಲ, ವಿ.ಸಿ. ಹಾವೇರಿಮಠ ಹಾಗೂ ಇನ್ನಿತರರು ಇದ್ದರು.
ಎ.ಟಿ. ಪೀಠದ ಸ್ವಾಗತಿಸಿದರು. ಎಸ್.ಪಿ. ಚರಂತಿಮಠ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement